ನೈನಾಡು ಸ್ನೇಹಗಿರಿ ರಸ್ತೆಯಲ್ಲಿ ಪಿಎಫ್‍ಐ ಬೆಂಬಲಿಸಿ ಬರಹ

ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ನಯನಾಡು ಗೊಳಿಯಂಗಡಿ ಸಂಪರ್ಕ ರಸ್ತೆಯಲ್ಲಿ “ಚಡ್ಡಿಗಳೆ ಎಚ್ಚರಿಕೆ ಪಿಎಫ್‍ಐ ನಾವು ಮರಳಿ ಬರುತ್ತೇವೆ “ಎಂದು ಬಿಳಿ ಬಣ್ಣದ ಸ್ಪ್ರೆ ಪೈಂಟಿನಿಂದ ಬೆದರಿಕೆ ಬರಹ ಬರೆದಿದ್ದಾರೆ. ಈ ಬಗ್ಗೆ ಬಿಜೆಪಿ ಯುವ ಮೋರ್ಚಾದವರು ದೂರು ನೀಡಿದ್ದಾರೆ.

ಸಮಾಜದ ಸಾಮಾಜಿಕ ಅಶಾಂತಿಗೆ ಕೋಮು ದ್ವೇಷಕ್ಕೆ ಕಾರಣವಾದ ಈ ಬರಹದ ಹಿಂದಿರುವ ಸಮಾಜಘಾತುಕ ಶಕ್ತಿಗಳನ್ನು ತಕ್ಷಣವೆ ಪತ್ತೆ ಹಚ್ಚಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಯುವಮೋರ್ಚಾ ಬಂಟ್ವಾಳ ಮತ್ತು ಸಾರ್ವಜನಿಕರು ಪುಂಜಾಲಕಟ್ಟೆ ಠಾಣಾಧಿಕಾರಿ ಇವರಿಗೆ ದೂರು ದಾಖಲಿಸಿ ತಕ್ಷಣ ಆರೋಪಿಗಳನ್ನು ಬಂಧಿಸಬೇಕಾಗಿ ಮನವಿ ಮಾಡಲಾಯಿತು. ಪ್ರಮುಖರಾದ ಬಂಟ್ವಾಳ ಯುವಮೋರ್ಚಾದ ದಿನೇಶ್ ದಂಬೇದಾರ್, ಯತಿನ್ ಶೆಟ್ಟಿ ಕುಮಂಗಿಲ,ರಾಜೇಶ್ ಶೆಟ್ಟಿ ನಯನಾಡು ಹಾಗು ಪಿಲಾತಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣ ಹೆಗ್ಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ ಹಾಗೂ ಸಾರ್ವಜನಿಕರಾದ ಪ್ರಕಾಶ್ ರಾವ್,ದಯಾನಂದ, ವಿಘ್ನೇಶ್,ಹರಿಂದ್ರ ಪೈ, ಜಯಪ್ರಸದ್, ನಿರಂಜನ್,ಆನಂದ,ಗುರುಪ್ರಸಾದ್ ಶೆಟ್ಟಿ,ಹರೀಶ್ ಶೆಟ್ಟಿ,ಗುರುಪ್ರಸಾದ್ ಶೆಟ್ಟಿ ಕೆರೆಕೊಡಿ,ವಿಜಯ್,ಅವಿನ್ ಕುಮಾರ್,ಚಂದ್ರಶೇಖರ್ ಮತ್ತಿತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.