ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ರಾಜೇಶ್ ಪುದುಶೇರಿ ನೇಮಕ
ಬೆಳ್ತಂಗಡಿ: ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ರಾಜೇಶ್ ಪುದುಶೇರಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಇವರ ಸೇವೆಯನ್ನು ಗುರುತಿಸಿ ರಾಜ್ಯ ಸಭಾ ಸದಸ್ಯರು ಹಾಗೂ ಇತರ ನಾಯಕರ ಶಿಫಾರಸ್ಸಿನಂತೆ ಭಾರತ ಸರ್ಕಾರವು ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜೇಶ್ ಪುದುಶೇರಿ ಅವರು ಬೆಂಗಳೂರು ರೈಲ್ವೆಯ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.