ಮಂಗಳೂರು : ಡಿ. 14ರಂದು ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ

ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸುಧಾರಣೆ ತರುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಮೂಲಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಡಿ. 14ರ ಪೂ.11ಕ್ಕೆ ರಾಜ್ಯಾದ್ಯಂತ ವರ್ಚ್ಯುವೆಲ್ ಮಾಧ್ಯಮದ ಮೂಲಕ 100 ನಮ್ಮ ಕ್ಲಿನಿಕ್ ಕೇಂದ್ರಗಳನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡುವರು.

ಅದರಂತೆ ದ.ಕ.ಜಿಲ್ಲೆಯ ಸೂಟರ್‌ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್, ಮೀನಕಳಿಯ, ಕೆರೆಬೈಲು, ಗಂಟಲ್‌ಕಟ್ಟೆ, ದುಗ್ಗಲಡ್ಕ, ಕಡಬ ಸಹಿತ 10 ನಮ್ಮ ಕ್ಲಿನಿಕ್‌ಗಳು ಚಾಲನೆಗೊಳ್ಳಲಿದೆ.

ಶಾಸಕರಾದ ವೇದವಾಸ್ ಕಾಮತ್ ಸೂಟರ್‌ ಪೇಟೆಯಲ್ಲಿ, ಡಾ. ಭರತ್ ಶೆಟ್ಟಿ ಪಚ್ಚನಾಡಿಯಲ್ಲಿ, ಯು.ಟಿ. ಖಾದರ್ ಉಳ್ಳಾಲದ  ಕೆರೆಬೈಲ್, ಉಮಾನಾಥ್ ಕೋಟ್ಯಾನ್ ಗಂಟಲ್‌ಕಟ್ಟೆಯಲ್ಲಿ, ಸಚಿವ ಎಸ್.ಅಂಗಾರ ದುಗ್ಗಲಡ್ಕ ಹಾಗೂ ಕಡಬದಲ್ಲಿ ‘ನಮ್ಮ ಕ್ಲಿನಿಕ್’ನ್ನು ಲೋಕಾರ್ಪಣೆ ಮಾಡುವವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.

Related Posts

Leave a Reply

Your email address will not be published.