ಲೋಕಕಲ್ಯಾಣಾರ್ಥವಾಗಿ ನಡೆಯುವ ಶ್ರೀ ಸಹಸ್ರ ನರಸಿಂಹಯಾಗದ ಪ್ರಯುಕ್ತವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಮುಲ್ಕಿ: ಕಿನ್ನಿಗೋಳಿಯ ಮಹಾಮಾಯಿ ಕಟ್ಟೆಯ ಬಳಿಯ ಶ್ರೀ ಶಾರದ ಮಂಟಪದಲ್ಲಿ ಜರಗುತ್ತಿರುವ ಅತಿ ವಿಶಿಷ್ಟ ಶ್ರೀ ಸಹಸ್ರ ನೃಸಿಂಹಯಾಗ ಸಮಿತಿ ವತಿಯಿಂದ ಆಯೋಜಿಸಿದ್ದ ಲೋಕಕಲ್ಯಾಣಾರ್ಥವಾಗಿ ನಡೆಯುವ ಶ್ರೀ ಸಹಸ್ರ ನೃಸಿಂಹಯಾಗ ಯಾಗದ ಪ್ರಯುಕ್ತ ಬುಧವಾರ ಪ್ರಾತಃಕಾಲ 5 ಗಂಟೆಗೆ ಗುರು ಗಣಪತಿ ಪೂಜನ,ಆವಾಹಿತ ದೇವತಾ ಪೂಜನ, ಬೆಳಿಗ್ಗೆ 7 ಗಂಟೆಗೆ ಸಹಸ್ರ ನೃಸಿಂಹ ಹವನ,11.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 1.30 ಲಘ ಪುರ್ಣಾಹುತಿ, ಮಧ್ಯಾಹ್ನ ಪೂಜೆ, ಗೋಪೂಜೆ, ರಾತ್ರಿ 8.30 ಕ್ಕೆ ಅಷ್ಟಾವಧಾನ ಸೇವೆ, ಹಾಗೂ ರಾತ್ರಿ ಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೌಮ್ಯ ಭಟ್ ಮತ್ತು ಬಳಗದವರಿಂದ ಭಕ್ತಿ ರಸ ಮಂಜರಿ ಹಾಗೂ, ಕಿನ್ನಿಗೋಳಿಯ ಶಿವ ಪ್ರಣಾಮ ನ್ರತ್ಯ ಸಂಸ್ಥೆ ವತಿಯಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಯಾಗ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಣೈ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಧನಂಜಯ ಶೆಟ್ಟಿಗಾರ್ ಸಾಗರಿಕಾ, ಶ್ರೀನಿವಾಸ ಶಣೈ, ಪ್ರತೀಕ್ ಶೆಟ್ಟಿ, ನವೀನ್ ಪೂಜಾರಿ, ರಾಜೇಶ್ ಕುಂದರ್, ಪ್ರೇಮರಾಜ ಶೆಟ್ಟಿ, ರಾಜೇಶ್ ಕುಲಾಲ್, ಕಿಶೋರ್ ಶೆಟ್ಟಿ ಕೊಡೆತ್ತೂರು, ಪ್ರಕಾಶ್ ಆಚಾರ್ಯ, ಕೇಶವ ಪೂಜಾರಿ ಸಂಗಮ್ ,ಸಂತೋಷ್ ಶೆಟ್ಟಿ ಜೊಡುಬೈಲು, ರಮೇಶ್ ಶೆಟ್ಟಿ ಬರ್ಕೆ, ಶಂಕರ ಶೆಟ್ಟಿ ಮೂಡ್ರಗುತ್ತು ಮತ್ತಿತರರು ಉಪಸ್ಥಿತರಿದ್ದರು.