ನಾರಾವಿ : ವೆಸ್ಟ್‍ಕೋಸ್ಟ್ ನ ನೂತನ ಶಾಖೆ ಉದ್ಘಾಟನೆ

ವಿವಿಧ ಬಗೆಯ ವಿನ್ಯಾಸದೊಂದಿಗೆ ಮಾರುಕಟ್ಟೆ ಗೆ ದ್ವಿಚಕ್ರ ವಾಹನವನ್ನ ಪರಿಚಯಿಸುತ್ತಿರುವ ವೆಸ್ಟ್ ಕೋಸ್ಟ್ ಮೋಟಾರ್ಸ್ ಇದೀಗ ಸುವೇಗ ಮೋಟರ್ಸ್ ಸಹಬಾಗಿತ್ವದಲ್ಲಿ ಬೆಳ್ತಂಗಡಿಯ ನಾರಾವಿಯಲ್ಲಿ ಆರಂಭಿಸಿದ ಶ್ರೀ ಗುರು ಮೋಟಾರ್ಸ್ ಶೋರೂಂನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗ್ರಾಹಕರು ದಸರಾ ಹಬ್ಬದ ಪ್ರಯುಕ್ತ ಹತ್ತಿರದ ಷೋರೂಮ್ ನಲ್ಲಿಯೇ ದ್ವಿಚಕ್ರ ವಾಹನ ಖರೀದಿ ಮಾಡಬೇಕು ಎನ್ನುವ ಉದ್ದೇಶದಿಂದ ನೂತನ ಶಾಖೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಬೆಳ್ತಂಗಡಿ ತಾಲೂಕಿನ ನಾರಾವಿಯ ಮಧುವನ ಅರ್ಕೆಡ್ ಮರೋಡಿ ರಸ್ತೆಯಲ್ಲಿ ವೆಸ್ಟ್‍ಕೋಸ್ಟ್ ಸಂಸ್ಥೆಯ ಶ್ರೀ ಗುರು ಮೋಟಾರ್ಸ್ ನೂತನ ಶಾಖೆ ಶುಭಾರಂಭಗೊಂಡಿತು. ನೂತನ ಶಾಖೆಯನ್ನು ಸೂರ್ಯಕೃಪಾ ಹೌಸ್ ನಾರಾವಿಯ ಶ್ರೀಧರ್ ಪೂಜಾರಿ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಂತರ ಗಣ್ಯರು ನೂತನ ಬೈಕ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಸಿದರು.

ಇದೇ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೆಸ್ಟ್‍ಕೋಸ್ಟ್‍ನ ಜನರಲ್ ಮ್ಯಾನೇಜರ್ ಸಂದೀಪ್ ಅವರು ಮಾತನಾಡಿ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಾರಾವಿಯಲ್ಲಿ ಹೀರೋ ಕಂಪನಿಯ ಶೋರೂಂನ್ನು ಆರಂಭಿಸಿದ್ದೇವೆ ಎಂದರು. ಇದೇ ವೇಳೆ ನೂತನ ದ್ವಿಚಕ್ರ ವಾಹನ ಖರೀದಿದಾರರಿಗೆ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿಯ ಬಿಜೆಪಿ ಬೋರ್ಡ್ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಮಡಂತ್ಯಾರ್‍ನ ಸುವೇಗ ಮೋಟಾರ್ಸ್‍ನ ನವೀನ್ ಕೆ., ಕುಡ್ಯಡಿಗುತ್ತು ಕಾಂಪ್ಲೆಕ್ಸ್‍ನ ವಿಶ್ವನಾಥ್ ಕುಡ್ಯಡಿ, ಆಳದಂಡಗಿ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷರಾದ ರವೀಂದ್ರ ಪೂಜಾರಿ, ನರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉದಯ್ ಹೆಗ್ಡೆ, ನಾರಾವಿ ಮಧುವನ ಅರ್ಕೆಡ್‍ನ ರೂಪಕ್ ನಾರಾವಿ ಮತ್ತು ಶ್ರೀ ಗುರು ಮೋಟಾರ್ಸ್‍ನ ಮಾಲಕರಾದ ಜಯ ಪೂಜಾರಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ 9880419816, 6360389270 ಸಂಪರ್ಕಿಸಬಹುದು.

Related Posts

Leave a Reply

Your email address will not be published.