ರಾಷ್ಟ್ರೀಯ ಶಿಕ್ಷಣ ನೀತಿ – 2020 : ವಿಚಾರ ಸಂಕಿರಣ ಉಪನ್ಯಾಸ ಮತ್ತು ಮುಕ್ತ ಸಂವಾದ

ಶಿಕ್ಷಣದ ಸುಧಾರಣೆಗಾಗಿ ಭಾರತ ಸರಕಾರವು 2020ರಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಒಳಿತನ್ನುಂಟು ಮಾಡಿದೆಯೇ? ಇದುವರೆಗಿನ ಸಾಧನೆಗಳೇನು? ಬಾಧಕಗಳೇನು? – ಇತ್ಯಾದಿ ಜಿಜ್ಞಾಸೆಗಳು ಶೈಕ್ಷಣಿ ವಲಯದಲ್ಲಿ ಮೂಡಿದ್ದು, ಇದರ ಸಲುವಾಗಿ ಚರ್ಚಿಸಲು ಉಪನ್ಯಾಸ ಮತ್ತು ಮುಕ್ತ ಸಂವಾದವನ್ನು ಮೇಲಿನ ಮೂರು ಸಂಘಟನೆಗಳ ಆಶಯದಲ್ಲಿ ಹಮ್ಮಿಕೊಳ್ಳಲಾಗಿದೆ.

5-2-2023 ಬೆಳಿಗ್ಗೆ 9-30ರಿಂದ ದಿನಪೂರ್ತಿ ಜರಗುವ ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಣ ತಜ್ಞರು,ಪೋಷಕರು, ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಒಂದೆಡೆ ಕೂತು ಚರ್ಚಿಸಬೇಕಿದೆ. ರಾಷ್ಟ್ರೀಯ ಶಿಕ್ಷಣನೀತಿ ಜಾರಿಯಾಗುವುದಕ್ಕೆ ಮುನ್ನ ಸಾಕಷ್ಟು ಚರ್ಚೆಗಳಾಗದೆ ತರಾತುರಿಯಲ್ಲಿ ಶಿಕ್ಷಣ ನೀತಿಯು ಜಾರಿಯಾದುದರಿಂದ ಈಗ ಚರ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಇದು ಅತ್ಯಂತ ತುರ್ತಿನ ಸಂಗತಿಯೂ ಹೌದು. ಈ ಹಿನ್ನೆಲೆಯಲ್ಲಿ ಇಂತಹ ಒಂದು ಉಪನ್ಯಾಸ, ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು `ಹೊಸತು’ ತಿಂಗಳ ಪತ್ರಿಕೆ ಸಂಪಾದಕರಾದ ಡಾ. ಸಿದ್ಧನಗೌಡ ಪಾಟೀಲ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ “ರಾಷ್ಟ್ರೀಯ ಶಿಕ್ಷಣನೀತಿ-2020” ಪುಸ್ತಕ ಬಿಡುಗಡೆಗೊಳಿಸುವ ಮೂಲಕ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ಪೊ..ಹೆಚ್.ಎಂ. ವಾಟ್ಸನ್ ನೆರವೇರಿಸಲಿರುವರು.

“ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳು” ಎಂಬ ವಿಷಯದಲ್ಲಿ ನವದೆಹಲಿಯ ಜೆ.ಎನ್.ಯು.ನ ನಿವೃತ್ತ ಪ್ರಾಧ್ಯಾಪಕರಾದ ಮತ್ತು ಸಾಹಿತಿ ಚಿಂತಕರಾದ ಡಾ. ಪುರುಶೋತ್ತಮ ಬಿಳಿಮಲೆ ಉಪನ್ಯಾಸ ನೀಡಲಿದ್ದಾರೆ. ಶಿಕ್ಷಣತಜ್ಞ ಡಾ. ನಿರಂಜನಾರಾಧ್ಯರವರು “ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಾಲಾ ಶಿಕ್ಷಣ” ಮತ್ತು “ರಾಷ್ಟ್ರೀಯ ಶಿಕ್ಷಣ ನೀತಿ : ಪಠ್ಯ ಹಾಗಾ ಶಿಕ್ಷಣ ಕ್ರಮ”ದ ಬಗ್ಗೆ ಶಿಕ್ಷಣತಜ್ಞ ಡಾ. ಸುಕುಮಾರ್ ಗೌಡ ಅವರು ಉಪನ್ಯಾಸ ನೀಡಲಿದ್ದಾರೆ. ಮಂಗಳೂರಿನ ತಜ್ಞವೈದ್ಯರಾದ ಡಾ. ಬಿ. ಶ್ರೀನಿವಾಸ ಕಕ್ಕಿಲಾಯರವರು “ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ವೈದ್ಯಕೀಯಶಿಕ್ಷಣ” ಕುರಿತಂತೆ ಉಪನ್ಯಾಸ ನೀಡಲಿರುವರು. ಮಧ್ಯಾಹ್ನದ ನಂತರದ ಸಮಾರೋಪ ಕಾರ್ಯಕ್ರಮದಲ್ಲಿ ಮುಕ್ತ ಸಂವಾದ ಮತ್ತು ಚರ್ಚೆ ನಡೆಯಲಿದೆ. ನಿಣರ್ಯಗಳನ್ನು ಕೈಗೊಳ್ಳಲಿದೆ.

Related Posts

Leave a Reply

Your email address will not be published.