ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ವರ್ಗಾವಣೆ

ಸುಳ್ಯ: ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರಿಗೆ ವರ್ಗಾವಣೆಯಾಗಿದೆ.ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯನ್ವಯ ಅಧಿಕಾರಿಗಳ ವರ್ಗಾವಣೆಯಾಗುತ್ತಿದ್ದು ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರಿಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಗ್ರಾಮಾಂತರ ವೃತ್ತಕ್ಕೆವರ್ಗಾವಣೆಯಾಗಿದೆ.ಸುಳ್ಯ ವೃತ್ತ ನಿರೀಕ್ಷಕರಾಗಿ ಅಂಕೋಲದಲ್ಲಿ ಸರ್ಕಲ್ಇನ್‌ಸ್ಪೆಕ್ಟರ್ ಆಗಿರುವ ಸಂತೋಷ್ ಶೆಟ್ಟಿ ಎಂಬವರು ಬರಲಿದ್ದಾರೆ ಎಂದು ತಿಳಿದು ಬಂದಿದೆ. ನವೀನ್‌ಚಂದ್ರ ಜೋಗಿ ಅವರು 3 ವರ್ಷ ಮೂರು ತಿಂಗಳ ಕಾಲ ಸುಳ್ಯ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
