ಸುಳ್ಯ: ಜಿ.ಪಂ. ಮಾಜಿ ಸದಸ್ಯ ನವೀನ್ ಕುಮಾರ್ ರೈ ಹೊಳೆ ನೀರಿಗೆ ಬಿದ್ದು ಮೃತ್ಯು
ಬಿಜೆಪಿ ಮುಖಂಡ ಜಿ.ಪಂ. ಮಾಜಿ ಸದಸ್ಯ ನವೀನ್ ಕುಮಾರ್ ರೈ ಮೇನಾಲ ಅವರು ಹೊಳೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ತುದಿಯಡ್ಕ ಬಳಿ ಪಯಸ್ವಿನಿ ನದಿಗೆ ತನ್ನ ತೋಟಕ್ಕೆ ನೀರು ಸರಬರಾಜು ಮಾಡುವ ಪಂಪ್‌ನ ಪುಟ್ ವಾಲ್ ರಿಪೇರಿಗೆಂದು ಇಳಿದಿದ್ದ ಸಂದರ್ಭ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮೃತದೇಹವನ್ನು ಮೇಲೆತ್ತಲಾಗಿದೆ ಎಂದು ಹೇಳಲಾಗಿದೆ.
ಪಯಸ್ವಿನಿ ನದಿಗೆ ಅಳವಡಿಸಲಾದ ತನ್ನ ತೋಟಕ್ಕೆ ನೀರು ಸರಬರಾಜುಮಾಡುವ ಪಂಪ್‌ನ ಪುಟ್ ವಾಲ್ ರಿಪೇರಿಗೆಂದು ಇಳಿದಿದ್ದ ಸಂದರ್ಭ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವವನ್ನು ಮೇನಾಲದ ಮನೆಗೆ ಕೊಂಡೊಯ್ದು ಸಾರ್ವಜನಿಕ ಅಂತಿಮ ದರ್ಶನದ ಬಳಿಕ ಸಂಸ್ಕಾರ ನಡೆಯಲಿದೆ.
ಹಲವು ಮಂದಿ ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಅಂತಿಮ ದರ್ಶನ ಪಡೆದರು. ಮಾಜಿ ಸಚಿವ ಎಸ್.ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ,ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ ಹಲವು ಮಂದಿ ಅಂತಿಮ ದರ್ಶನ ಪಡೆದರು.ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.
ಜಿ.ಪಂ.ಸದಸ್ಯರಾಗಿದ್ದ ಸಂದರ್ಭ ತನ್ನ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದ ನವೀನ್ ಕುಮಾರ್ ರೈ ಮೇನಾಲ ಬಿಜೆಪಿಯ ಪ್ರಭಾವೀ ಮುಖಂಡರಾಗಿದ್ದರು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಶಕ್ತಿ ಕೇಂದ್ರದ ಪ್ರಮುಖ್, ಬಿಜೆಪಿ ಮಂಡಲ ಸಮಿತಿ ಸದಸ್ಯರಾಗಿದ್ದರು. ಅಜ್ಜಾವರ ಗ್ರಾ.ಪಂ.ಸದಸ್ಯರಾಗಿದ್ದರು. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಅವರು ಜನಾನುರಾಗಿಯಾಗಿದ್ದರು..