ಇತಿಹಾಸ ಪ್ರಸಿದ್ಧ ನಾವುಂದ ಕಂಬಳ ಮಹೋತ್ಸವ

ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ನಾವುಂದ ಕಂಬಳ ಮಹೋತ್ಸವವು ಸಂಭ್ರಮದಲ್ಲಿ ನಡೆಯಲಿರುವುದು. ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಗುತ್ತದೆ ವಿಶಾಲವಾದ ಈ ಕಂಬಳ ಗದ್ದೆಯನ್ನು ತೋರಣಗಳಿಂದ ಅಲಂಕಾರಿಸಲಾಗುತ್ತದೆ

navunda kambala

. ಹಲವಾರು ವರ್ಷಗಳಿಂದ ಕಂಬಳವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ವೆಂಕಟರಮಣ ಗಾಣಿಗ ನಾವುಂದ ಅವರ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ.ಈ ಬಾರಿ ಸೆನ್ಸಾರ್ ಮೂಲಕ ಕೋಣದ ಓಟದ ವೇಗಮಿತಿಯನ್ನು ಅಳೆಯುವ ಸಾಧನ ಅಳವಡಿಸಲಾಗುತ್ತದೆ. ಈ ದಿನ ಹಗ್ಗದ ಓಟ ಹಿರಿಯ ವಿಭಾಗ , ಕೋಣಗಳ ಹಗ್ಗದ ಓಟ ಕಿರಿಯ ವಿಭಾಗ ,ಕೋಣಗಳ ಹಗ್ಗದ ಓಟ ಅತಿ ಕಿರಿಯ ವಿಭಾಗ, ಕೋಣಗಳ ಹಲಗೆ ಓಟ ನಡೆಯಿತು.

ವಿಜೇತರಾದ ಕೋಣಗಳ ಮಾಲೀಕರಿಗೆ ಮತ್ತು ಕ್ರೀಡಾಳುಗಳಿಗೆ ನಗದು ಮತ್ತು ಶಾಶ್ವತ ಫಲಕದೊಂದಿಗೆ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಗಣ್ಯರು, ಕೋಣಗಳ ಮಾಲೀಕರು, ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ನಾವುಂದ ಕಂಬಳ ಸಮಿತಿಯ ಸರ್ವ ಸದಸ್ಯರು ಊರ ಗ್ರಾಮಸ್ಥರು ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.