ಜಾಹಿರಾತು ಫಲಕ ತೆರವು ನಡೆಸದ ನವಯುಗ್ ಕಂಪನಿಗೆ ಕೋಟಿ ಮೊತ್ತದ ದಂಡ

ಹೆದ್ದಾರಿ ಅಂಚಿನಲ್ಲಿರುವ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಮೀನಮೇಷ ಎಣಿಸುತ್ತಿದ್ದ ನವಯುಗ್ ಕಂಪನಿಗೆ ಹೆದ್ದಾರಿ ಇಲಾಖಾ ಅಧಿಕಾರಿಗಳು ಕೋಟಿ ಮೊತ್ತದಲ್ಲಿ ದಂಡ ವಿಧಿಸಿದ್ದಾರೆ.

ಡೆಲ್ಲಿಯಿಂದ ಪರಿಶೀಲನೆಗೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಆರ್.ಓ. ವಿವೇಕ್ ಜೈಸ್ವಾಲ್ ಪರಿಶೀಲಿಸಿ ಹೆದ್ದಾರಿ ಅಂಚಿನಲ್ಲಿ ಬೇಕಾಬಿಟ್ಟಿ ಜಾಹೀರಾತು ಫಲಕಗಳನ್ನು ಗಮನಿಸಿ ಈ ದಂಡ ವಿಧಿಸಿ ತಕ್ಷಣದಿಂದಲೇ ಅದನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ.

ಅವರ ಆದೇಶಕ್ಕೆ ಬೆದರಿದ ನವಯುಗ್ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಮೂಲಕ ತಕ್ಷಣವೇ ಜಾಹಿರಾತು ಫಲಕಗಳ ತೆರೆವು ಕಾರ್ಯ ಆರಂಭಿಸಿದೆ. ಈ ತೆರವು ಕಾರ್ಯದ ಮಾತನಾಡಿದ ಸಾರ್ವಜನಿಕರು, ಹೆದ್ದಾರಿ ಇಲಾಖೆ ವಶಪಡಿಸಿ ಕೊಂಡಿರುವ ಹೆದ್ದಾರಿಗೆ ತೀರ ಹತ್ತಿರದ ಕಟ್ಟಡಗಳ ಪರಿಹಾರ ಮೊತ್ತ ಪಡೆದುಕೊಂಡಿರುವ ಬಹುತೇಕ ಮಂದಿ ಅದೇ ಕಟ್ಟಡಗಳನ್ನು ಅಪಾಯಕಾರಿಯಾಗಿ ಬಾಡಿಗೆಗೆ ನೀಡಿ ವಸೂಲಿ ದಂಧೆ ಮಾಡುತ್ತಿದ್ದಾರೆ, ಅದನ್ನು ಕೂಡ ತೆರವು ಕಾರ್ಯ ನಡೆಸ ಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ. ಕೆಲವೇ ತಿಂಗಳಲ್ಲಿ ಆ ಕಾರ್ಯ ಕೂಡಾ ನಡೆಯಲಿದೆ ಎಂಬುದಾಗಿ ಇಲಾಖೆ ತಿಳಿಸಿದೆ.
