ನೀಟ್ ಯುಜಿ ಫಲಿತಾಂಶ: ಆಕಾಶ್ ಎಜ್ಯುಕೇಶನ್ ಸಂಸ್ಥೆ ವಿದ್ಯಾರ್ಥಿಯ ಸಾಧನೆ:ಮಂಗಳೂರು ಶಾಖೆಯ ಅಮನ್ ಅಬ್ದುಲ್ ಹಕೀಂ ಟಾಪ್ ಸ್ಕೋರರ್

ಪರೀಕ್ಷಾ ಪೂರ್ವ ಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ಆಕಾಶ್ ಎಜ್ಯುಕೇಶನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಮಂಗಳೂರಿನ ಶಾಖೆಯ ಅಮನ್ ಅಬ್ದುಲ್ ಹಕೀಂ ಪ್ರತಿಷ್ಠಿತ ನೀಟ್ ಯುಜಿ ಪರೀಕ್ಷೆಯಲ್ಲಿ ೭೧೦ ಅಂಕಗಳೊಂದಿಗೆ ಕ್ರಮವಾಗಿ ಎಐಆರ್ ೫೯೨ ಶ್ರೇಯಾಂಕ ಗಳಿಸಿ ಅತ್ಯತ್ತಮ ಸಾಧನೆ ಮಾಡಿದ್ದಾರೆ.

ಅಮನ್ ಅಬ್ದುಲ್ ಹಕೀಂ ಅವರ ಗಮನಾರ್ಹ ಸಾಧನೆಯು ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಆಕಾಶ್ ಎಜ್ಯುಕೇಶನಲ್ ಸರ್ವೀಸಸ್ ಲಿಮಿಟೆಡ್‌ನ ಒದಗಿಸಿದ ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳ ಅಸಾಧಾರಣ ಸಾಧನೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿರುವ ಆಕಾಶ್ ಎಜ್ಯುಕೇಶನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥರಾದ ಧೀರಜ್ ಕುಮಾರ್ ಮಿಶ್ರಾ ಅವರು, ಈ ವಿದ್ಯಾರ್ಥಿಯ ಅಮೋಘ ಸಾಧನೆಗಾಗಿ ನಾವು ಅಭಿನಂದಿಸುತ್ತೇವೆ. ದೇಶದೆಲ್ಲೆಡೆಯ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ 2024 ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಈ ವಿದ್ಯಾರ್ಥಿಯ ಸಾಧನೆಯು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಹೆತ್ತವರ ಬೆಂಬಲವನ್ನು ಬಣ್ಣಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾಡುವ ಎಲ್ಲ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ ಎಂದರು.