ವಿಧಾನ ಪರಿಷತ್ ಸದಸ್ಯರ ನೇತ್ರತ್ವದಲ್ಲಿ ವರಹಮೂರ್ತಿಗೆ ನೇಮ

ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ರವರ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಮನೆಯಲ್ಲಿ ವರಹಮೂರ್ತಿ ಹಾಗೂ ವಾರ್ತಾಳಿ ದೈವಗಳ ಹರಕೆಯ ನೇಮೋತ್ಸವ ಬಹಳ ಅದ್ಧೂರಿಯಾಗಿ ಜರಗಿತು. ಕಾಪು ತಾಲೂಕಿನ ಪಡುಬಿದ್ರಿ ಯುಪಿಸಿಎಲ್ ಕಾಲೋನಿ ಪ್ರದೇಶದ ಲಕ್ಷ್ಮೀ ವೆಂಕಟೇಶ ನಿಲಯದಲ್ಲಿ ಕುಟುಂಬದ ಹಿರಿಯರು ಆರಾಧಿಸಿಕೊಂಡು ಬಂದಿರುವ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೇಮೋತ್ಸವ ವಿಧ್ಯುಕ್ತವಾಗಿ ನೆರವೇರಿದೆ.

ಸಂಜೆ ಹೊತ್ತಿಗೆ ಹಿರಿಯರ ಮಾರ್ಗದರ್ಶನದಂತೆ ಭಂಡಾರ ಹೊರಟು ಸಾರ್ವಜನಿಕ ಅನ್ನಸಂತರ್ಪಣೆಯ ತದ ನಂತರ ನೇಮೋತ್ಸವ ನಡೆದಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ದಂಪತಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಹಿತ ಅನೇಕ ಗಣ್ಯತೀ ಗಣ್ಯರು ಪಾಲ್ಗೊಂಡಿದ್ದರು.
