ನ.10ರಿಂದ ಬಿ.ಸಿ ರೋಡ್‍ನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನ್ಯೂ ಚೆನ್ನೈ ಶಾಪಿಂಗ್ ಸಂಸ್ಥೆಯಿಂದ ವಸ್ತ್ರಗಳ ಮಾರಾಟ ಮೇಳ

ಬಂಟ್ವಾಳ: ಕಳೆದ ಮೂರು ತಿಂಗಳ ಹಿಂದೆ ಬಂಟ್ವಾಳ ತಾಲೂಕಿನ ಜನ ಮನ ಗೆದ್ದ ನ್ಯೂ ಚೆನ್ನೈ ಶಾಪಿಂಗ್ ಸಂಸ್ಥೆಯಿಂದ ವಸ್ತ್ರಗಳ ಮಾರಾಟ ಮೇಳ ನವೆಂಬರ್ 10, ಗುರುವಾರದಿಂದ ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯಲ್ಲಿ ಸಭಾಂಗಣದಲ್ಲಿ ಪುನಾರಂಭಗೊಳ್ಳಲಿದೆ.

ಗ್ರಾಹಕರ ಬೇಡಿಕೆಗೆ ಸ್ಪಂದಿಸಿ ಮತ್ತೆ ಒಂದು ತಿಂಗಳ ಕಾಲ ಎಲ್ಲಾ ವಯೋಮಾನದ ಜನರ ಮನಕೊಪ್ಪುವ ಬಟ್ಟೆಗಳ ಮಾರಾಟ ಇಲ್ಲಿ ನಡೆಯಲಿದೆ. ಗ್ರಾಹಕರು ಖರೀದಿಸುವ ಪ್ರತಿಯೊಂದು ಬಟ್ಟೆಯ ಬೆಲೆ ಕೇವಲ 199 ಆಗಿದ್ದು ಅತ್ಯಂತ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಬೆಲೆಯಲ್ಲಿ ದೊರಕಲಿದೆ. ಎಲ್ಲಾ ಬಗೆಯ ಸೀರೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್ಗಳು, ಲೆಗ್ಗಿನ್ಸ್, ಫ್ಲಾಝಾ ಫ್ಯಾಂಟ್ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆರ್ಕಿನ್, ಬಾಬಾಸೂಟ್, ಚಪ್ಪಲಿಗಳು, ಬ್ಯಾಗ್ಗಳು ಇಲ್ಲಿ ಮಾರಾಟಕ್ಕಿದ್ದು ಕಡಿಮೆ ಬೆಲೆಗೆ ಬಟ್ಟೆಗಳನ್ನು ಖರೀದಿಸಬಹುದಾಗಿದೆ.
ನ್ಯೂ ಚೆನ್ನೈ ಶಾಪಿಂಗ್ ಸಂಸ್ಥೆಯು ಕಳೆದ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಬಿ.ಸಿ.ರೋಡು ಪರಿಸರದಲ್ಲಿ ಎರಡನೇ ಬಾರಿಗೆ ಬೃಹತ್ ಬಟ್ಟೆಗಳ ಮಾರಾಟ ಮೇಳ ಪುನಾರಂಭಗೊಂಡಿರುವುದು ಸ್ಥಳೀಯ ಗ್ರಾಹಕರಲ್ಲೂ ಉತ್ಸಾಹ ಹಾಗೂ ನಿರೀಕ್ಷೆ ಮೂಡಿಸಿದೆ.
