ಪ್ರಧಾನಿ ನರೇಂದ್ರ ಮೋದಿಯಿಂದ ನೂತನ ಸಂಸತ್ ಭವನ ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು. ಉದ್ಘಾಟನೆಗೂ ಮುನ್ನ ಅವರು ಹೋಮ, ಪೂಜೆಗಳನ್ನು ನೆರವೇರಿಸಿದರು. ಅಧೀನಂ ಸ್ವಾಮೀಜಿಗಳಿಂದ ‘ಸೆಂಗೋಲ್’ ಸ್ವೀಕರಿಸಿದ ಮೋದಿ, ಅದನ್ನು ಸಂಸತ್ ಭವನದ ಒಳಗೆ ಪ್ರತಿಷ್ಠಾಪಿಸಿದರು. ಬಳಿಕ ಸರ್ವ ಧರ್ಮ ಪ್ರಾರ್ಥನ ಸಮಾರಂಭದಲ್ಲಿ ಅವರು ಭಾಗಿಯಾದರು.
ಎಲ್ಲ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ನರೇಂದ್ರ ಮೋದಿ ಅವರು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಂಸತ್ ಭವನವನ್ನು ಉದ್ಘಾಟಿಸಿದರು.