ವಿವಿ ಫಲಿತಾಂಶ ಪ್ರಕಟ ಮಾಡುವಲ್ಲಿ ವಿಳಂಬ ಧೋರಣೆ ಎನ್‍ಎಸ್‍ಯುಐನಿಂದ ಧರಣಿ

ವಿದ್ಯಾರ್ಥಿ ವೇತನ ಸ್ಥಗಿತ, ವಿವಿಯಿಂದ ಫಲಿತಾಂಶ ಪ್ರಕಟ ವಿಳಂಬ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎನ್‍ಎಸ್‍ಯುಐ ವತಿಯಿಂದ ಇಂದು ಧರಣಿ ನಡೆಯಿತು.

NSUI PROTEST

ನಗರದ ಮಿನಿ ವಿಧಾನ ಸೌಧದ ಎದುರು ಸೇರಿದ್ದ ಎನ್‍ಎಸ್‍ಯುಐ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ ನಡೆಸಲು ಮುಂದಾಗುತ್ತಿದ್ದಂತೆಯೇ ಅಲ್ಲಿದ್ದ ಪೆÇಲೀಸರು ಅವರನ್ನು ವಶಕ್ಕೆ ಪಡೆದರು.

ಧರಣಿನಿರತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎನ್‍ಎಸ್‍ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ರಾಜ್ಯ ಉಪಾಧ್ಯಕ್ಷ ಸುಹಾನ್ ಆಳ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಫ್ವಾನ್, ಮುಖಂಡರಾದ ಸೋಹನ್ ಸಿರಿ, ಓಂಶ್ರೀ, ಸಿರಾಜ್, ಅಝೀಮ್, ನಿಖಿಲ್, ಸಾಹಿಲ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.