ಪತ್ರಕರ್ತರಲ್ಲಿ ಹೋರಾಟದ ಮನೋಭಾವ ಇರಬೇಕು : ಓಶಿಯನ್ ಪರ್ಲ್ ಹೋಟೆಲ್‍ ಉಪಾಧ್ಯಕ್ಷ ಗಿರೀಶ್

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ಕರಾವಳಿ ಅಭಿವೃದ್ಧಿ ಮತ್ತು ಪತ್ರಿಕೋದ್ಯಮದ ಬಗ್ಗೆ ವಿಚಾರಗೋಷ್ಟಿ ನಡೆಯಿತು. ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪತ್ರಕರ್ತರ ಜಿಲ್ಲಾ ಸಮ್ಮೇಳನದಲ್ಲಿ ವಿಚಾರಗೋಷ್ಟಿ ನಡೆಯಿತು. ಹಿರಿಯ ಪತ್ರಕರ್ತರಾದ ಅನಿಲ್ ಶಾಸ್ತ್ರಿ ಅವರು ವಿಷಯ ಮಂಡಿಸಿದರು.

ಓಶಿಯನ್ ಪರ್ಲ್ ಹೋಟೆಲ್‍ನ ಉಪಾಧ್ಯಕ್ಷರಾದ ಗಿರೀಶ್ ಅವರು ಕರಾವಳಿ ಅಭಿವೃದ್ಧಿ ಮತ್ತು ಪತ್ರಿಕೋದ್ಯಮದ ಬಗ್ಗೆ ಮಾತನಾಡಿ, ಕರಾವಳಿ ಅಭಿವೃದ್ಧಿ ಆಗುತ್ತಿದೆ. ನೂರು ವರ್ಷದ ಹಿಂದೆ ಇದ್ದ ಸಂಸ್ಕøತಿ ಇವತ್ತು ಕೂಡ ಹಾಗೇಯೆ ಇದೆ. ಇದು ನಾವು ಹೆಮ್ಮೆ ಪಡುವಂತಹ ವಿಚಾರ. ಕರಾವಳಿಯ ಬ್ಯಾಂಕ್‍ಗಳಲ್ಲಿ ಒಂದಾದ ಕಾರ್ಪೋರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್‍ನೊಂದಿಗೆ ಮರ್ಜ್ ಆಗಿದ್ದು ಬೇಸರದ ಸಂಗತಿ. ಒಂದು ದಿವಸ ಪ್ರತಿಭಟನೆ ಮಾಡಿದ್ದು ಬಿಟ್ಟರೆ, ಯಾರೂ ಕೂಡ ಆ ಬಗ್ಗೆ ಹೋರಾಟ ಮಾಡಿಲ್ಲ. ನಮ್ಮ ಸಮಾಜಕ್ಕೆ ಏನಾದರೂ ತೊಂದರೆಗೊಳಗಾದ ನಾವು ಹೋರಾಡಲೇಬೇಕು ನಮ್ಮ ಊರಿಗೋಸ್ಕರ ನಮ್ಮ ಜನತೆಗಾಗಿ ನಾವು ಹೋರಾಡಬೇಕು. ಪತ್ರಕರ್ತರಿಗೆ ಹೋರಾಟದ ಮನೋಭಾವ ಇರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಮನೋಹರ್ ಪ್ರಸಾದ್, ಅನಘ ರಿಫೈನರಿಯ ಪ್ರೈವೆಟ್ ಲಿಮಿಟೆಡ್‍ನ ಮ್ಯಾನೆಜಿಂಗ್ ಡೈರೆಕ್ಟರ್ ಸಾಂಬಾಶಿವರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.