‘ಒಂದೊಳ್ಳೆ ಲವ್‍ಸ್ಟೋರಿ’ ಕನ್ನಡ ಸಿನಿಮಾ ಫೆ.17ರಂದು ಬಿಡುಗಡೆ
ಪಿನಕಿನ್ ಸಿನಿಮಾಸ್ ಬ್ಯಾನರ್‍ನಡಿ ನಿರ್ಮಿಸಿದ ಒಂದೊಳ್ಳೆ ಲವ್‍ಸ್ಟೋರಿ ಕನ್ನಡ ಸಿನಿಮಾ ಫೆ.17ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ಅಶ್ವಿನ್ ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಿಗ್‍ಬಾಸ್ ಖ್ಯಾತಿಯ ಧನುಶ್ರೀ ನಾಯಕಿಯಾಗಿದ್ದು, ನಿರಂಜನ್ ಬಾಬು, ಕೈಲಾಸ್‍ಪಾಲ್, ನಿಶಾ ಹೆಗಡೆ, ಬಿಂದೂಜ, ಕೆಎಸ್‍ಜಿ ವೆಂಕಟೇಶ್, ರೂಪಶ್ರೀ ವರ್ಕಾಡಿ, ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಫೆ.3ರಂದು ಯುಎಸ್‍ಎನಲ್ಲಿ ಪ್ರೀಮಿಯರ್ ಶೋ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ನಟಿ ರೂಪಶ್ರೀ ವರ್ಕಾಡಿ, ಸಂಗೀತ ನಿದೇರ್ಶಕ ಆಕಾಶ್ ಜಾಧವ್, ನಟರಾದ ಕೈಲಾಸ್ ಪಾಲ್, ರವಿ ಎಂ.ಎಸ್. ಉಪಸ್ಥಿತರಿದ್ದರು.