ವಿಶ್ವ ಕಲಾ ರತ್ನ ಪ್ರಶಸ್ತಿ ಪುರಸ್ಕೃತ ಪಿ. ಟಿ .ಪ್ರಕಾಶ್ ಶೆಟ್ಟಿ ವಿಧಿವಶ
ವಿಶ್ವ ಕಲಾ ರತ್ನ ಪ್ರಶಸ್ತಿ ಪುರಸ್ಕೃತ,'' ಖ್ಯಾತ ನಿರೂಪಕ, ಕ್ರೀಡಾಭಿಮಾನಿ, ಕ್ರೀಡಾ ನಿರೂಪಕ ,ಪ್ರತಿಭಾನ್ವಿತ ಯಕ್ಷಗಾನ ಕಲಾವಿದ, ಆಕಾಶವಾಣಿ ಕಲಾವಿದ, ಉತ್ತಮ ವಾಗ್ಮಿ ಹಾಗೂ ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ .ಟಿ ಪ್ರಕಾಶ್ ಶೆಟ್ಟಿ ಬೆಳಗೋಡು ಅಸ್ತಂಗತರಾಗಿದ್ದಾರೆ.ಹಲವಾರು ಸಾಧನೆಗಳ ಬೆನ್ನತ್ತಿ ಹಾಗೂ ಕ್ರೀಡಾಭಿಮಾನಿಗಳ ನಿಲುವನ್ನು ತನ್ನತ್ತ ಸೆಳೆದುಕೊಂಡು ಜಿಲ್ಲೆಯಲ್ಲಿಯೇ ಅತ್ಯುತ್ತಮ ನಿರೂಪಕ ಎಂದು ಗುರುತಿಸಿಕೊಂಡಿದ್ದಾರೆ. ಉತ್ತಮ ಯಕ್ಷಗಾನ ಅರ್ಥಧಾರಿಯಾಗಿ ಹವ್ಯಾಸಿ ಹಾಗೂ ವೃತ್ತಿ ಮೇಳಗಳಲ್ಲಿ 1000 ಕ್ಕೂ ಹೆಚ್ಚು ಬಾರಿ ನಿರ್ವಹಣೆ ಮಾಡಿದ್ದಲ್ಲದೆ, ಸತ್ಯನಾ ಕೊಡೇರಿ ನಿರ್ದೇಶನದ
ಜಂಟ್ಲ್ ಮೆನ್” ನಾಟಕದಲ್ಲಿ ಜಂಟ್ಲ್ ಮೆನ್'' ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡರಲ್ಲದೆ, ಹಾಗೆ
ಯುದ್ಧ ಭೂಮಿ” ಹಾಗೂ “ಕಾರ್ಗಿಲ್ ವೀರ” ಎಂಬ ನಾಟಕವನ್ನು ರಚಿಸಿ, ಪ್ರದರ್ಶನ ಮನೆಮಾತಾಯಿತು.
ಅದಲ್ಲದೆ ಆಕಾಶವಾಣಿಯ ಕಲಾವಿದರಾಗಿ ಗುರುತಿಸಿಕೊಂಡು ಜಿಲ್ಲೆಯಲ್ಲೇ ಅತ್ಯುತ್ತಮ ಶಿಕ್ಷಕರಾಗಿ ಗುರುತಿಸಿಕೊಂಡರು.ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿಯಲ್ಲಿ ದೈಹಿಕ ಶಿಕ್ಷಕನಾಗಿ ಸೇವೆ ಸಲ್ಲಿಸಿ ಅಗ್ರಗಣ್ಯರೆನಿಸಿದ್ದಾರೆ.
ಶ್ರೀಯುತರು ಪತ್ನಿ ಅನೂರಾಧ ಮಕ್ಕಳಾದ ಶಶಿ ತೀರ್ಥ, ಮತ್ತು ಧ್ರುವ ತೀರ್ಥ ಅವರನ್ನು ಅಗಲಿದ್ದಾರೆ.ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು.