ಪಡಿಲ್ ಗೇಟ್ ಉದ್ಘಾಟನೆ ; ಮಂಗಳೂರು ಬೆಳವಣಿಗೆ ಹೊಸ ಕೊಡುಗೆ : ಶಾಸಕ ವೇದವ್ಯಾಸ ಕಾಮತ್

ಮಂಗಳೂರು : ನಗರದ ಪಡಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಪಡಿಲ್ ಗೇಟ್’ ಕಮರ್ಷಿಯಲ್ ಸೆಂಟರ್ ನ ಉದ್ಘಾಟನೆ ಹಾಗೂ ಇಲ್ಲಿ ಆಯೋಜಿಸಲಾಗಿರುವ ಡಿಸ್ಕೌಂಟ್ ಮೇಳದ ಉದ್ಘಾಟನೆ ಶುಕ್ರವಾರ ನೆರವೇರಿತು. ಪಡಿಲ್ ಗೇಟ್ ಕಮರ್ಷಿಯಲ್ ಸೆಂಟರನ್ನು ಮಂಗಳೂರು ಮೇಯರ್ ಜಯಾನಂದ ಅಂಚನ್ ಉದ್ಘಾಟಿಸಿದರು.

padil gate

ಈ ಸೆಂಟರ್ ನಲ್ಲಿ ಆಯೋಜಿಸಲಾಗಿರುವ ‘ಮಂಗಳೂರು ಕಾರ್ನಿವಲ್’ ವಸ್ತು ಪ್ರದರ್ಶನ ಮೇಳವನ್ನು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು , ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಹಾಗೂ ವಿಸ್ತಾರವಾಗುತ್ತಿರುವ ಮಂಗಳೂರು ನಗರದ ಬೆಳವಣಿಗೆ ಪಡಿಲ್ ಗೇಟ್ ಕಮರ್ಷಿಯಲ್ ಸೆಂಟರ್ ದೊಡ್ಡ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

vedavyas kamath

ಮಂಗಳೂರು ಮೇಯರ್ ಜಯಾನಂದ ಅಂಚನ್ ಅವರು ಮಾತನಾಡಿ, ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಕ್ಕೆ ಪಡಿಲ್ ಗೇಟ್ ಹೊಸ ಶೋಭೆ ತರಲಿದೆ ಎಂದರು. ಮಾಜಿ ಶಾಸಕ ಜೆ.ಆರ್.ಲೊಬೋ ಅವರು ಮಾತನಾಡಿ, ಹೊಸ ಜಿಲ್ಲಾಧಿಕಾರಿ ಕಚೇರಿಗೆ ಸನಿಹದಲ್ಲೇ ನಿರ್ಮಾಣಗೊಂಡ ಪಡಿಲ್ ಗೇಟ್ ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.

ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರು ಮಾತನಾಡಿ, ಸ್ಮಾರ್ಟ್ ಸಿಟಿ ಮಂಗಳೂರು ಅಭಿವೃದ್ಧಿಗೆ ಪೂರಕವಾಗುವಂತೆ ಉದ್ದಿಮೆದಾರರು , ಬಿಲ್ಡರ್ ಗಳು ಯೋಜನೆಯನ್ನು ರೂಪಿಸಬೇಕು , ಇದಕ್ಕೆ ಪೂರಕವಾಗಿ ಆಡಳಿತ ವ್ಯವಸ್ಥೆ ಸ್ಪಂದಿಸಬೇಕು ಎಂದು ಆಶಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ, ಕಾರ್ಪೊರೇಟರ್ ರೂಪಶ್ರೀ ಪೂಜಾರಿ , ಮನೋಹರ್ ಕದ್ರಿ ಶುಭ ಕೋರಿದರು.ಸ್ಥಳದ ಮಾಲೀಕರಾದ ಸತೀಶ್ ಶೆಟ್ಟಿ , ಬಾವ ಬಿಲ್ಡರ್ಸ್ ನ ಪ್ರವರ್ತಕ ಅಬ್ದುಲ್ ಖಾದರ್ , ಹೈಲ್ಯಾಂಡ್ ಬಿಲ್ಡರ್ಸ್ ನ ಪಾಲುದಾರರಾದ ಮುಬಾರಕ್ ಸುಲೈಮಾನ್, ಕೆ.ಎ.ಇಬ್ರಾಹಿಂ, ಉಪಸ್ಥಿತರಿದ್ದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ , ಮಹೇಶ್, ರಾಜೇಶ್ ಭಾಗವಹಿಸಿದ್ದರು.

padil gate

ಡಿಂಕಿ ಡೈನ್ ಮಾಲಕ ಸ್ವರ್ಣ ಸುಂದರ್ ಅವರು ಸ್ವಾಗತಿಸಿದರು. ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.ಪಡಿಲ್ ಗೇಟ್ ನಲ್ಲಿ ಆಯೋಜಿಸಲಾಗಿರುವ ಡಿಸ್ಕೌಂಟ್ ಮೇಳ ಜನವರಿ 4 ರ ತನಕ ನಡೆಯಲಿದೆ. ವೈವಿಧ್ಯಮಯ ಉತ್ಪನ್ನಗಳು ವಿಶೇಷ ರಿಯಾಯಿತಿಯಲ್ಲಿ ಈ ಮೇಳದಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Related Posts

Leave a Reply

Your email address will not be published.