ಮೋದಿ ಮಂಗಳೂರು ಭೇಟಿ ಹಿನ್ನಲೆ: ಪಡುಬಿದ್ರಿಯಿಂದ ಘನ ವಾಹನಗಳಿಗೆ ಪ್ರವೇಶ ನಿಷೇಧ

ಉಡುಪಿ ಕಡೆಯಿಂದ ಮಂಗಳೂರು ಕಡೆ ಪ್ರಯಾಣಿಸುವ ಘನ ವಾಹನಗಳ ಸಹಿತ ಗೂಡ್ಸ್ ವಾಹನಗಳಿಗೆ ಪ್ರವೇಶ ನಿರಾಕರಿಸಿ ಕಾರ್ಕಳ ರಸ್ತೆಯಾಗಿ ಪ್ರಯಾಣ ಮುಂದುವರಿಸಲು ಪೊಲೀಸರು ಸೂಚನೆ ನೀಡಿದ್ದರೂ ಸುತ್ತು ಬಳಸಿ ಹೋಗುವುದನ್ನು ತಪ್ಪಿಸಲು ಬ್ರಹತ್ ಟ್ರಕ್ ಗಳು ಕಾರ್ಕಳ ರಸ್ತೆಯುದ್ಧಕ್ಕೂ ಹೆದ್ದಾರಿಗಂಟಿಕೊಂಡೇ ನಿಂತಿರುವುದರಿಂದ ಮತ್ತೊಂದು ಸಮಸ್ಯೆ ಸೃಷ್ಠಿಗೆ ಸಿದ್ದತೆ ನಡೆಸಿದಂತ್ತಿದೆ.ಮುಂಜಾನೆ ಆರು ಗಂಟೆಯಿಂದ ಸಂಜೆ ಆರರ ವರಗೆ ಈ ಪ್ರಕೃಯೆ ನಡೆಯಲಿರುವುದರಿಂದ ಪಡುಬಿದ್ರಿ ಪೊಲೀಸರು ಮಳೆ ಬಿಸಿಲೆನ್ನದೆ ಕರ್ತವ್ಯ ನಿರ್ವಾಹಿಸುತ್ತಿದ್ದು, ಈ ವೇಳೆ ತುರ್ತು ಗುರಿ ತಲುಪ ಬೇಕಾದ ವಾಹನ ಚಾಲಕರು ಪೆÇಲೀಸರಲ್ಲಿ ಕಾಡಿ ಬೇಡಿದರೂ ಆದೇಶ ಪಾಲನೆಯ ಜರೂರು ಪೊಲೀಸರ ಮೇಲಿರುವುದರಿಂದ ಸ್ಪಷ್ಟವಾಗಿ ನಿರಾಕರಿಸಿದಾಗ ಕೋಪಗೊಂಡ ಚಾಲಕರು ಕಾರಣರಾದವರಿಗೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯ ಎಂಬಂತ್ತಾಗಿದೆ.ಮೀನು ಹೇರಿಕೊಂಡು ಸಮಯಕ್ಕೆ ಸರಿಯಾಗಿ ಕೇರಳ ತಲುಪ ಬೇಕಾಗಿದ್ದು, ತಪ್ಪಿದ್ದಲ್ಲಿ ಕೇರಳದಲ್ಲಿ ಮೀನು ಪಡೆಯದೆ ಹಿಂದೆ ಬಿಟ್ಟರೆ ನಷ್ಟದ ಮೇಲೆ ನಷ್ಟ ಸಂಭವಿಸ ಬೇಕಾಗುತ್ತದೆ ಎನ್ನುತ್ತಾರೆ ಚಾಲಕರೊಬ್ಬರು. ಇಂಥಹ ಬದಲಾದ ಸಂಚಾರ ನಿಯಮಗಳನ್ನು ಒಂದು ದಿನ ಹಿಂದೆಯೇ ಮಾದ್ಯಮಗಳಲ್ಲಿ ಪ್ರಕಟಿಸಿದ್ದರೆ ನಾವು ಜಾಗೃತರಾಗುತ್ತಿದ್ದೇವು ಎನ್ನುತ್ತಾರೆ ಅರ್ಧ ದಾರಿಯಲ್ಲಿ ಸಿಲುಕಿ ದಿನವಿಡೀ ರಸ್ತೆಯಂಚಿನಲ್ಲಿ ಕಾಯುವ ದುಸ್ಥಿತಿ ತಂದುಕೊಂಡಿರುವ ವಾಹನ ಚಾಲಕರು.