ಪಡುಬಿದ್ರೆ – ಗ್ಯಾಸ್ ಪೈಪ್ ಅಳವಡಿಕೆಯಲ್ಲಿ ತಾರತಮ್ಯ : ಬಡವರ ಕಟ್ಟಡ ಧ್ವಂಸ

ಯಾವುದೇ ರೀತಿಯಲ್ಲಿ ಕರುಣೆ ತೋರಿಸದೆ ಹೆದ್ದಾರಿ ಇಕ್ಕೆಲಗಳಲ್ಲಿ ಗ್ಯಾಸ್ ಪೈಪ್ ಅಳವಡಿಸುತ್ತಿರುವ ಗುತ್ತಿಗೆದಾರ ಬಡಪಾಯಿಗಳ ಕಟ್ಟಡಕ್ಕೆ ಜೆಸಿಬಿ ಹತ್ತಿಸಿ ದ್ವಂಸ ನಡೆಸಿದ್ದು, ಇದೀಗ ಸಿರಿವಂತರ ಮೇಲಿನ ಕರುಣೆಯಿಂದಾಗ ಹೆದ್ದಾರಿಗೆ ಅತೀ ಸಮೀಪ ವಿರುವ ಮನೆಗಳನ್ನು ಉಳಿಸಲು ಭೂಗತ ಪೈಪ್ ಲೈನ್ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಈ ಕಾಮಗಾರಿಯಿಂದ ತೊಂದರೆ ಅನುಭವಿಸಿದ ಸಂತ್ರಸ್ತರು, ಹೆದ್ದಾರಿಗೆ ಬಹಳ ದೂರವಿದ್ದರೂ ಬಡಪಾಯಿಗಳಾದ ನಮ್ಮ ಕಟ್ಟಡಗಳನ್ನು ಯಂತ್ರದ ಮೂಲಕ ದ್ವಂಸ ಗೈದು ಕಾಮಗಾರಿ ನಡೆಸಿದ್ದಾರೆ, ಮಾಡಲಿ ಅಭಿವೃದ್ಧಿಗೆ ನಮ್ಮ ಅಡ್ಡಿ ಇಲ್ಲ…ಇದೇ ನಿಯಮ ಸಿರಿವಂತರಿಗೂ ಅನ್ವಯವಾಗ ಬೇಕಲ್ಲವೇ..ಆದರೆ ಇಲ್ಲಿ ಎರ್ಮಾಳು ಪ್ರದೇಶದಲ್ಲಿ ಸಿರಿವಂತರ ಕಟ್ಟಡ, ಮನೆಯ ಆವರಣಗೋಡೆ ಉಳಿಸಲು ಭೂಗತ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಅದಲ್ಲದೆ ಆ ಕಾಮಗಾರಿಗಾಗಿ ಅದೇಷ್ಟೋ ಮನೆಗಳ ದಾರಿಗೆ ಪೈಪ್ ಗಳನ್ನು ಅಡ್ಡ ಹಾಕಿ ದಾರಿ ಮುಚ್ಚುವ ಮೂಲಕ ಸಾರ್ವಜನಿಕರ ಸಹನೆ ಪರೀಕ್ಷಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.ಈ ಬಗ್ಗೆ ಸಂಬಂದ ಪಟ್ಟ ಇಲಾಖೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತ್ತೆ ಜನ ಆಗ್ರಹಿಸಿದ್ದಾರೆ.
