ಎರಡು ತಂಡಗಳ ಮಧ್ಯೆ ಹೊಡೆದಾಟ ದೂರು ಪ್ರತಿದೂರು

ಎರಡು ಯುವಕರ ತಂಡಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟ ಮುಂದುವರಿದು ಒಂದು ತಂಡದಿಂದ ಜಾತಿ ನಿಂದನೆ ಪ್ರಕರಣ ದಾಖಲಾದರೆ ಮತ್ತೊಂದು ತಂಡ ಜೀವ ಬೆದರಿಕೆ ಪ್ರಕರಣ ದಾಖಲಿಸಿದೆ.
ಸುಜ್ಲಾನ್ ಆರ್.ಆರ್. ಕಾಲೋನಿ ನಿವಾಸಿ ಉಮಾನಾಥ್ ಕೆ.ಆರ್. ಎಂಬವರ ಪುತ್ರ ಶಿವಪ್ರಕಾಶ್(19) ಎಂಬವರು ನೀಡಿದ ದೂರಿನಂತೆ ಆರೋಪಿಗಳಾದ ವಸಂತ್, ಬಾಲಕೃಷ್ಣ, ದಿವಾಕರ ಹಾಗೂ ರಾಕೇಶ್ ಎಂಬವರು, ಪರಿಶಿಷ್ಟ ಜಾತಿಗೆ ಸೇರಿದ ನಾನು ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ನಡೆದ ಢಕ್ಕೆ ಬಲಿಗೆ ಹೋಗಿದ್ದು ರಾತ್ರಿ ಒಂದರ ಸುಮಾರಿಗೆ ಮೂತ್ರ ವಿಸರ್ಜನೆಗೆ ಎಂಬುದಾಗಿ ನಾನು ನನ್ನ ತಮ್ಮ ಆದರ್ಶ್ ಸ್ನೇಹಿತರಾದ ಧನುಷ್ ಮತ್ತು ಪ್ರತೀಕ್ ಅಲ್ಲಿಗೆ ಬಂದ ವಸಂತ ಹಾಗೂ ಬಾಲಕೃಷ್ಣ ನನ್ನ ಕೆನ್ನೆಗೆ ಹೊಡೆದು ಜೀವ ಬೆದರಿಕೆ ಒಡ್ಡಿದ್ದಲ್ಲದೆ ನನ್ನ ಜಾತಿಯ ಹೆಸರೇಳಿ ನಿಂದಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಪ್ರತಿದೂರು: ತೆಂಕ ಎರ್ಮಾಳು ಗ್ರಾಮದ ಹಿರಿಯಣ್ಣ ಸಾಲ್ಯಾನ್ ಎಂಬವರ ಮಗ ನವೀನ್(34) ಇವರು ಪ್ರತಿದೂರು ನೀಡಿದ್ದು, ನಾನು ಹಾಗೂ ನನ್ನ ಸ್ನೇಹಿತರಾದ ರಾಕೇಶ್, ದಿವಾಕರ, ಬಾಲಕೃಷ್ಣ ಢಕ್ಕೆಬಲಿಗೆ ಹೋಗುತ್ತಿರುವ ವೇಳೆ ಉಮಾನಾಥ್ ಎಂಬವರ ಪುತ್ರ ಶಿವಪ್ರಕಾಶ್ ನಮ್ಮನ್ನು ತಡೆದು ವಸಂತ ಎಲ್ಲಿದ್ದಾನೆ.. ನೀನು ಹೇಳದಿದ್ದರೆ ನಿನ್ನನ್ನು ಬಿಡುವುದಿಲ್ಲ ಅವನನ್ನೂ ಬಿಡುವುದಿಲ್ಲ ಚೂರಿ ಹಾಕಿ ಕೊಲ್ಲುತ್ತೇನೆ ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ನೀಡಿದ ದೂರಿನಂತೆ ಪ್ರತಿದೂರು ದಾಖಲಾಗಿದೆ.
