ಪಡುಬಿದ್ರಿ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ : ಗಂಡನಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ

ಗೃಹಿಣಿಯೊರ್ವರು ತನ್ನ ವಾಸದ ಮನೆಯ ಅಡುಗೆ ಕೋಣೆಯಲ್ಲಿ ಶಾಲಿನಿಂದ ನೇಣು ಹಾಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನ್ಯಾಯಾಲಯ ಆರೋಪಿ ಗಂಡನಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆತ್ಮಹತ್ಯೆಗೆ ಶರಣಾದ ಗೃಹಿಣಿ ಪಡುಬಿದ್ರಿ ಕೆಳಗಿನ ಪೇಟೆ ನಿವಾಸಿ ಚೇತನ್ ಎಂಬಾತನ ಪತ್ನಿ ಮಮತ(43), ಎಂಟು ವರ್ಷದ ಒಂದು ಹೆಣ್ಣು ಮಗು ಹಾಗೂ ಹನ್ನೆರಡು ವರ್ಷದ ಗಂಡು ಮಗನನ್ನು ಹೊಂದಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದ್ದು, ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ ಮೃತಳ ಸಹೋದರ ತನ್ನ ತಂಗಿಯ ಸಾವಿನಲ್ಲಿ ಸಂಶಯವಿದ್ದು, ಆಕೆ ದೂರವಾಣಿ ಮೂಲಕ ಗಂಡ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ದೂರಿದ್ದಳು, ಅಲ್ಲದೆ ನನ್ನ ತಾಯಿ ಹಾಗೂ ಅಕ್ಕನಿಗೆ ಕರೆ ಮಾಡಿದ ಆರೋಪಿ ಚೇತನ್ ಆಕೆ ನನ್ನ ಹಣ ಕದ್ದಿದ್ದಾಳೆ ಆಕೆಯನ್ನು ತಕ್ಷಣ ಕರೆದುಕೊಂಡು ಹೋಗಿ ಇಲ್ಲವಾದರೆ ಆಕೆ ನನ್ನ ಕೈಯಲ್ಲಿ ಸಾಯುತ್ತಾಳೆ ಎಂಬುದಾಗಿ ಬೆದರಿಕೆ ಹಾಕಿದ್ದ ಬಗ್ಗೆಯೂ ಮೃತಳ ಸಹೋದರ ಲಿಖಿತ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ ವಿಧಿಸಿದೆ.