ವಿವಿಧ ಬೇಡಿಕೆಗೆ ಆಗ್ರಹಿಸಿ ಪಡುಬಿದ್ರಿ ರೈಲು ನಿಲ್ದಾಣಕ್ಕೆ ಸಾರ್ವಜನಿಕರ ಮುತ್ತಿಗೆ

ತಡೆ ರಹಿತ ರೈಲು ನಿಲುಗಡೆ, ಅಂಡರ್ ಪಾಸ್ ವ್ಯವಸ್ಥೆ, ಪಕ್ಕದ ರಸ್ತೆ ದುರಸ್ಥಿ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಪ್ರತಿಭಟನಾಗಾರರು ತಪ್ಪಿದ್ದಲ್ಲಿ ರೈಲು ರೋಕೋ ನಡೆಸುವ ಎಚ್ಚರಿಕೆ ನೀಡಿದ್ದಾರೆ.ಬೆಳಪು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಹ ಸಹಿತ ಸುತ್ತಲ ಗ್ರಾಮದ ನೂರಾರು ಮಂದಿ ಪುರುಷರು ಮಹಿಳೆಯರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಬೆಳಪು ದೇವಿಪ್ರಸಾದ್ ಶೆಟ್ಟಿ, ಬಹಳಷ್ಟು ವರ್ಷಗಳ ಬೇಡಿಕೆಯಾದ ಬೆಳಪುವಿನಲ್ಲಿ ಈ ರೈಲು ನಿಲ್ದಾಣ ಇದ್ದರೂ ದೂರದ ಪಡುಬಿದ್ರಿಯ ಹೆಸರಿದ್ದು ಅದನ್ನು ಬದಲಿಸಿ ಬೆಳಪು ಎಂಬುದಾಗಿ ಮರು ನಾಮಕರಣ ಮಾಡಬೇಕು, ಸುತ್ತಲ ಗ್ರಾಮಗಳ ಜನರ ಒತ್ತಾಯದಂತೆ ಅಗತ್ಯವಾಗಿ ತಡೆರಹಿತ ರೈಲುಗಳು ಇಲ್ಲಿ ನಿಲುಗಡೆಯಾಗ ಬೇಕಾಗಿದೆ, ರೈಲು ನಿಲ್ದಾಣದಿಂದಾಗಿ ರಸ್ತೆಯೇ ಇಲ್ಲದೆ ಗೃಹ ಬಂಧನದಲ್ಲಿರುವ ಹತ್ತಾರು ಮನೆಗಳಿಗೆ ಅನುಕೂಲ ಆಗುವಂತೆ ಅಂಡರ್ ಪಾಸ್ ರಸ್ತೆ ವ್ಯವಸ್ಥೆ, ರೈಲು ನಿಲ್ದಾಣದ ಬಳಿಯ ಬಳಿಯ ರಸ್ತೆ ದುರಸ್ಥಿ ಮುಂತಾದ ಬೇಡಿಕೆಗಳನ್ನು ಒಂದು ತಿಂಗಳಲ್ಲಿ ಈಡೇರಿಸ ಬೇಕು ತಪ್ಪಿದ್ದಲ್ಲಿ ಸಹಸ್ರಾರು ಮಂದಿಯನ್ನು ಸೇರಿಸಿ ರೈಲುರೋಕೋ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭ ಬೆಳಪು ಗ್ರಾ.ಪಂ. ಅಧ್ಯಕ್ಷೆ ಶೋಭ ಭಟ್, ಸಮಾಜ ಸೇವಕ ಜಾಹಿರ್ ಬೆಳಪು, ಮೈಕಲ್ ರಮೇಶ್ ಡಿಸೋಜ, ದ ರಾಕೇಶ್ ಕುಂಜೂರು, ಜ್ಯೋತಿ ಗಣೇಶ್ ಮುಂತಾದವರಿದ್ದರು.
