ಪಡುಬಿದ್ರಿ: ಹೆದ್ದಾರಿಯಲ್ಲಿ ಆಂಧ್ರ ಮೂಲದ ಯುವತಿಯ ರಕ್ಷಣೆ
ಪಡುಬಿದ್ರಿಯ ಠಾಣಾ ವ್ಯಾಪ್ತಿಯ ರಾ.ಹೆದ್ದಾರಿಯಲ್ಲಿ ರಾತ್ರಿ ಹೊತ್ತು ಒಬ್ಬಂಟಿಗಳಾಗಿ ನಡೆದುಕೊಂಡು ಹೋಗುತ್ತಿದ್ದ ಆಂಧ್ರದ ನೆಲ್ಲೂರು ನಿವಾಸಿ ಹನು (29) ಎಂಬ ಯುವತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ಅವರು ಸ್ಥಳೀಯ ಪೊಲೀಸರ ಸಹಾಯದಿಂದ ರಕ್ಷಿಸಿ ಚಿಕಿತ್ಸೆಗಾಗಿ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾನು ನಡೆದುಕೊಂಡೇ ತನ್ನೂರನ್ನು ಸೇರುತ್ತೇನೆ ಎಂದು ಮೊಂಡು ಹಠ ಮಾಡಿದ ಯುವತಿಯನ್ನು ಉಡುಪಿಯ ಸಖಿ ಸೆಂಟರ್‍ಗೆ ದಾಖಲಿಸಲು ಅವರು ಪ್ರಯತ್ನಿಸಿದರಾದರೂ ಆಕೆಯ ಉಗ್ರ ವರ್ತನೆಯ ಹಿನ್ನಲೆಯಲ್ಲಿ ಮಾನಸಿಕ ಚಿಕಿತ್ಸೆಯ ಅಗತ್ಯತೆಯನ್ನು ಕಂಡು ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಯುವತಿ ಮನೆ ಬಿಟ್ಟು 15 ದಿನಗಳಾಗಿವೆ ಎಂಬ ಮಾಹಿತಿಯನ್ನು ನೀಡಿದ್ದು, ಆಕೆಯ ಕೌಟಂಬಿಕ ಹಿನ್ನಲೆಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ.ಯುವತಿಯ ವಾರೀಸುದಾರರು ಇದ್ದಲ್ಲಿ ಪಡುಬಿದ್ರೆ ಪೆÇಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಶೆಟ್ಟಿ ತಿಳಿಸಿದ್ದಾರೆ. ಇಂತಹ ಒಬ್ಬಂಟಿ ಮಹಿಳೆಯರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಅವರ ಮೇಲೆ ದುಷ್ಕರ್ಮಿಗಳು ದೌರ್ಜನ್ಯವೆಸಗಿದ ಅನೇಕ ಪ್ರಕರಣಗಳು ನಡೆದಿರುವ ಹಿನ್ನಲೆಯಲ್ಲಿ ಸಾರ್ವಜನಿಕರು, ಸಂಬಂಧಪಟ್ಟ ಇಲಾಖೆಗಳು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕು ಎಂದು ವಿಶು ಶೆಟ್ಟಿ ಕೋರಿದ್ದಾರೆ.