ಪಡುಹಿತ್ಲು ಜಾರಂದಾಯ ಸನ್ನಿಧಿಗೆ ಸ್ವರ್ಣ ಖಡ್ಸಲೆ ಹಾಗೂ ಬೃಹತ್ ಕಾಲುದೀಪ ಅರ್ಪಣಾ ಮೆರವಣಿಗೆ

ಪಡುಬಿದ್ರಿ ಪಡುಹಿತ್ಲು ಜಾರಂದಾಯ ಬಂಟ ದೈವಸ್ಥಾನಕ್ಕೆ ಊರ ಪರವೂರ ಭಕ್ತಾಧಿಗಳು ನೀಡಿದ ಸುಮಾರು 60ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಖಡ್ಸಲೆ ಹಾಗೂ ಬೃಹತ್ ಕಾಲು ದೀಪವನ್ನು ಅದ್ಧೂರಿಯಾಗಿ ನೂರಾರು ಮಂದಿ ಭಕ್ತರು ಸೇರಿದ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಅರ್ಪಿಸಲಾಯಿತು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಧಾನದಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಅವಳಿ ಕುದುರೆಗಳು, ಭಜನಾ ಕುಣಿತ, ಕುದುರೆ ರಥ, ಚೆಂಡೆ, ವಾದ್ಯ ವಾದನ ಮುಂತಾದವುಗಳು ಗಮನ ಸೆಳೆದವು.

ಈ ಬಗ್ಗೆ ಮಾತನಾಡಿದ ಶ್ರೀಕ್ಷೇತ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ಅಮೀನ್, ನಮ್ಮ ನಿರೀಕ್ಷೆಗೂ ಮೀರಿ ಭಕ್ತಾಧಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಊರ ಪರವೂರ ಭಕ್ತಾಧಿಗಳ ಸಹಕಾರದಿಂದ ನಿರ್ಮಾಣ ಮಾಡಿದ ಸ್ವರ್ಣ ಖಡ್ಸಲೆ ನಮ್ಮೆಲ್ಲರ ಕನಸು ಆ ಕನಸು ಇಂದು ನನಸಾಗಿದೆ. ಕ್ಷೇತ್ರಕ್ಕೆ ಇದನ್ನು ಅರ್ಪಿಸುವ ವೇಳೆ ನಮ್ಮ ಕ್ಷೇತ್ರದ ದರ್ಶನ ಪಾತ್ರಿಗಳ ಮೂಲಕ ಜಾರಂದಾಯ ಬಂಟ ದೈವಗಳ ಸಾಕ್ಷಾತ್ಕಾರ ನಮಗಾಗಿ ಎಂದರು.
