ಪಡುಬಿದ್ರಿ: ಉಪಯೋಗವಿಲ್ಲದ ವಿದ್ಯುತ್ ಕಂಬ ತೆರವಿಗೆ ಆಗ್ರಹ
ಕಳೆದ ಎರಡು ವರ್ಷಗಳಿಂದ ಕಲ್ಲಟ್ಟೆ ಬ್ರಹ್ಮಸ್ಥಾನ ರಸ್ತೆಯ ತೀರ ಅಂಚಿನಲ್ಲಿರುವ ಉಪಯೋಗವಿಲ್ಲದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಪಡುಬಿದ್ರಿ ಮೆಸ್ಕಾಂ ಶಾಖಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಹಿಂದೆ ಪಕ್ಕದ ದೂರವಾಣಿ ಕೇಂದ್ರಕ್ಕೆ ಸಂಪರ್ಕವಿದ್ದು ಇದೀಗ ಅವರು ಬೇರೆಡೆಯಿಂದ ಅವರು ವಿದ್ಯುತ್ ಸಂಪರ್ಕ ಪಡೆದ ಕಾರಣ ಈ ಕಂಬಗಳು ಹಾಗೆಯೇ ಇದೆ. ಸಂಚಾರಕ್ಕೆ ತೊಡಕುಂಟು ಮಾಡುತ್ತಾ ರಸ್ತೆಗೆ ಅಂಟಿಕೊಂಡು ನಿಂತುಕೊಂಡಿದೆ. ಗ್ರಾಹಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂಧಿಸುತ್ತಾ ಉತ್ತಮ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಡುಬಿದ್ರಿ ಮೆಸ್ಕಾಂ ಶಾಖಾಧಿಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯವನ್ನು ಶೀಘ್ರವಾಗಿ ಮಾಡಲಿ ಎಂದು ಗ್ರಾಮಸ್ಥರು ಹೇಳುತ್ತಾರೆ.