ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ವಿಶೇಷ ಕಟ್ಟದಪ್ಪ ಸೇವೆ

ಪಡುಬಿದ್ರಿಯ ಪುರಾಣ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಿಶೇಷ ಕಟ್ಟದಪ್ಪ ಸೇವೆ ಜರಗಿತು.ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ. ಶ್ರೀಕ್ಷೇತ್ರದಲ್ಲಿ ನಿರಂತರ ನಡೆಯುವ ಬೆಲ್ಲದಪ್ಪ ಮತ್ತು ಪೆÇಟ್ಟಪ್ಪ ಸೇವೆಗಳು ಇಲ್ಲಿನ ವಿಶೇಷ ಸೇವೆ. ಈ ದಿನ ನಡೆಯುವುದು ಸಾರ್ವಜನಿಕ ಕಟ್ಟದಪ್ಪ(ಕಟಾಹಪೂಪ)ಸೇವೆ.

ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುವ ಕ್ರಷಿಕರು ಜನರು ಎಷ್ಟೇ ಪ್ರಯತ್ನ ಪಟ್ಟರೂ, ಕಾಮಿನಿ ಹೊಳೆಗೆ ಕಟ್ಟಿದ ಕಟ್ಟ(ದಂಡೆ) ನಿಲ್ಲದೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಕಾಲಘಟ್ಟದಲ್ಲಿ ಗ್ರಾಮ ದೇವರಿಗೆ ಕಟ್ಟ ನಿಲ್ಲುವಂತೆ ಹರಕೆ ಹೇಳಿರುವುದೇ ” ಕಟ್ಟದಪ್ಪ” ಹರಕೆಯ ಬಳಿಕ ಯಾವುದೇ ಸಮಸ್ಯೆ ಇಲ್ಲದಂತೆ ಹಾಕಲಾದ ತಡೆ ನಿಲ್ಲುತ್ತಿದ್ದು, ಈಗಲೂ ಆ ಆಚರಣೆ ರೂಢಿಯಲ್ಲಿದೆ. ಅಂದು 5-6 ಸೇರು ಅಕ್ಕಿ ಹಿಟ್ಟು ಮೂಲಕ ಮಧ್ಯಾಹ್ನ ನಡೆಯುತ್ತಿದ್ದ ಸೇವೆ ಇಂದು ಜಗದಗಲ ಹರಡಿ 100 ಮುಡಿ ಅಕ್ಕಿ ಬಳಕೆಯಾಗುವ ವರೆಗೆ ಬಂದು ತಲುಪಿದೆ.

ಕಳೆದ 20 ವರ್ಷಗಳಿಂದ ಶ್ರೀ ದೇವಳದಲ್ಲಿ ಯೋಗೀಶ್ ಭಟ್ ಕರ್ಕಟೆ ಹೌಸ್ ರವರ 85 ಜನರ ತಂಡ ಇಲ್ಲಿ ಕಟ್ಟದಪ್ಪ ತಯಾರಿಸುವ ಕಾಯಕ ಮಾಡುತ್ತಾ ಬಂದಿದೆ. 16 ವರ್ಷಗಳ ಹಿಂದೆ 20 ಮುಡಿ ಅಕ್ಕಿ ಹಿಟ್ಟಿನಿಂದ ಕಟ್ಟದಪ್ಪ ತಯಾರಿಸಲಾಗುತ್ತಿತ್ತು ಎನ್ನುವ ಯೋಗಿಶ್ ಭಟ್, ಈ ವರ್ಷ 100 ಮುಡಿ ಅಕ್ಕಿ ಹಿಟ್ಟು ಉಪಯೋಗಿಸಿ ಕಟ್ಟದಪ್ಪ ತಯಾರಿಸಲಾಗುತ್ತಿದೆ. ಇದರಿಂದ ಇದರ ಜನಪ್ರಿಯತೆ ಹಾಗೂ ಭಕ್ತರ ಭಕ್ತಿ ಭಾವದ ಬಗ್ಗೆ ಅರಿಯಬಹುದು ಎನ್ನುತ್ತಾರೆ.

ಈ ಬಾರಿ ಕಟ್ಟದಪ್ಪಕ್ಕೆ 100 ಮುಡಿ ಅಕ್ಕಿ ಹಿಟ್ಟು, 1500 ತೆಂಗಿನ ಕಾಯಿ, 3500 ಬಾಳೆ ಹಣ್ಣು, 3700 ಕೆಜಿ ಬೆಲ್ಲ, 30 ಗೋಣಿ ಚೀಲ ಅರಳು, 15 ಕೆಜಿ ಏಲಕ್ಕಿ ಮತ್ತು 80 ಟಬ್ಬಿ ಕೊಬ್ಬರಿ ಎಣ್ಣೆ ಬಳಸಿ ಈ ಕಟ್ಟದಪ್ಪ ತಯಾರಿಸಲಾಗುತ್ತದೆ. 85 ಜನರ ಅಡುಗೆಯಾಳುಗಳ ತಂಡ ಸೇರಿ 8 ಬಾಣಲೆ, 2 ಕೊಪ್ಪರಿಗೆ, 22 ಅಪ್ಪದ ಕಾವಲಿ ಮೂಲಕ ಬೆಳಗಿನ ಜಾವ 1.30 ಗಂಟೆಯಿಂದ ಆರಂಭಿಸಿ ರಾತ್ರಿ 6, 7 ಗಂಟೆ ತನಕ ಸುಮಾರು 2 ಲಕ್ಷ ಅಪ್ಪಗಳನ್ನು .ತಯಾರಿಸಿದ್ದಾರೆ.ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ, ಅನುವಂಶೀಯ ಮೊಕ್ತೇಸರ ರತ್ನಾಕರ ರಾಜ್ ಕಿನ್ನಕ್ಕ ಬಳ್ಳಾಲ್ ಮತ್ತು ರವಿ ಭಟ್ ಸಮಗ್ರ ಮಾಹಿತಿ ನೀಡಿದರು.

Related Posts

Leave a Reply

Your email address will not be published.