ಪಡುಬಿದ್ರಿ : ಕಾಲೇಜಿಗೂ ಮೈದಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದ ಪ್ರಾಂಶುಪಾಲರು
ಶಾಲೆಯಲ್ಲಿ ಪಾಠ ಪ್ರವಚನ ನಡೆಯುತ್ತಿರುವ ಶಾಲಾ ವೇಳೆಯಲ್ಲಿ ಮೈದಾನವನ್ನು ಇತರೆ ಯಾವುದೇ ಕಾರ್ಯಕ್ರಮಗಳಿಗೆ ನೀಡದಂತೆ ತಿಳಿಸಲು ಹೋದ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳಲ್ಲಿ ಕಾಲೇಜಿಗೂ ಮೈದಾನಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಮೂಲಕ ಪ್ರಾಂಶುಪಾಲರು ಕರ್ತವ್ಯ ಮರೆತು ವರ್ತಿಸಿದ್ದಾರೆ ಎಂದು ಆಕ್ರೋಶಿತರಾದ ಅವರು ಪೊಲೀಸ್ ಠಾಣಾ ಮೆಟ್ಟಲೇರಿದ್ದಾರೆ.
ಈ ಬಗ್ಗೆ ಮಾತನಾಡಿದ ಹಳೆವಿದ್ಯಾರ್ಥಿಯೂ ಪಡುಬಿದ್ರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷರಾದ ವೈ. ಸುಕುಮಾರ್, ಮಕ್ಕಳ ಹಿತದೃಷ್ಟಿಯಿಂದ ಶಾಲಾ ಹೊತ್ತಲ್ಲಿ ಮೈದಾನವನ್ನು ಸಾರ್ವಜನಿಕ ಊಪಯೋಗಕ್ಕೆ ನೀಡದಂತೆ ಕಾಲೇಜು ಪ್ರಾಂಶುಪಾಲರಲ್ಲಿ ಮನವಿ ಮಾಡಲು ಹೋದ ಸಂದರ್ಭ ಖಾರವಾಗಿಯೆ ವರ್ತಿಸಿದ ಅವರು ನಮಗೂ ಮೈದಾನಕ್ಕೂ ಯಾವುದೇ ಸಂಬಂಧವಿಲ್ಲ, ಅದು ಸರ್ಕಾರಿ ಮೈದಾನ ಸಾರ್ವಜನಿಕರು ಏನು ಮಾಡಿದರೂ ನಾವು ಕೇಳುವಂತ್ತಿಲ್ಲ ಎಂಬುದಾಗಿ ತನ್ನ ಜವಾಬ್ದಾರಿ ಮರೆತು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.