ರಸ್ತೆ ದಾಟಲು ನಿಂತಿದ್ದ ಬಾಲಕಿ ಮೇಲೆ ಹರಿದ ಖಾಸಗಿ ಬಸ್ – ಬಾಲಕಿ ಮೃತ್ಯು

ಬಹಳಷ್ಟು ಅಮಾಯಕರ ಬಲಿ ಪಡೆದ ರಾಷ್ಟ್ರೀಯ ಹೆದ್ದಾರಿ ಇದೀಗ ರಸ್ತೆ ದಾಟಲು ನಿಂತಿದ್ದ, ಬಾಲಕಿ ಮೇಲೆ ತಡೆರಹಿತ ಖಾಸಗಿ ಬಸ್ ಹರಿದು ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ದಂಢತೀರ್ಥ ಶಾಲಾ ಎಂಟನೇ ತರಗತಿ ಬಾಲಕಿ ವರ್ಷೀತಾ ಶೇರ್ವೇಗಾರ್(13) ಎಂಬಾಕೆ ಮೃತಪಟ್ಟ ಬಾಲಕಿ. ಗಂಭೀರ ಗಾಯಗೊಂಡ ಬಾಲಕಿಯನ್ನು ಉಡುಪಿ ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗದೆ ಬಾಲಕಿ ಮೃತ ಪಟ್ಟಿದ್ದಾಳೆ.

ರಾಷ್ಟ್ರೀಯ ಹೆದ್ದಾರಿ ಅಗೆದು ಹಾಕಿ ನಿರ್ಲಕ್ಷ್ಯದಿಂದ ಆಮೆಗತಿಯ ಕಾಮಗಾರಿ ನಡೆಸುತ್ತಿದ್ದರಿಂದ ಅದೇಷ್ಟೋ ಬೈಕ್ ಸವಾರರು ಅಪಘಾತಕ್ಕೀಢಾಗಿ ಕೈ ಕಾಲು ಮುರಿದುಕೊಂಡಿರುವ ಒಂದೆರಡು ಮಂದಿಯಲ್ಲ. ಇದೀಗ ಸುಮಾರು ಹತ್ತು ದಿನಗಳ ಹಿಂದೆ ಮಾರಿಗುಡಿ ದೇವಸ್ಥಾನದ ಮುಂಭಾಗದ ಪ್ಲೈ ಒವರ್ ನ ಒಂದು ಭಾಗದ ರಸ್ತೆಯನ್ನು ಅಗೆದು ಹಾಕಿದ್ದ ಪರಿಣಾಮ ಅಪಾಯಕಾರಿಯಾಗಿ ಒಂದೇ ರಸ್ತೆಯಲ್ಲಿ ಎರಡು ಕಡೆಗೆ ವಾಹನಗಳು ಸಂಚರಿಸುತ್ತಿದ್ದು ಈ ಅಪಘಾತಕ್ಕೆ ಒಂದು ಕಾರಣವಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋ ವ್ಯಕ್ತಪಡಿಸಿದ್ದಾರೆ.
