ಪಡುಬಿದ್ರಿ: ತಡೆರಹಿತ ಬಸ್ಸುಗಳ ಪೈಪೋಟಿ, ಹೆದ್ದಾರಿ ಬ್ಲಾಕ್
ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಮುಖ್ಯ ಪೇಟೆಯಲ್ಲಿ ಖಾಸಗಿ ಬಸ್ಸುಗಳೆರಡು ಪೈಪೋಟಿಯಿಂದ ಮುನ್ನುಗ್ಗಿ ಬಂದು ಒಂದು ಬಸ್ ಮತ್ತೊಂದಕ್ಕೆ ಅಡ್ಡವಾಗಿ ನಿಂತ ಪರಿಣಾಮ ಸುಮಾರು ಹತ್ತು ನಿಮಿಷಗಳ ಕಾಲ ಹೆದ್ದಾರಿ ತಡೆಯುಂಟಾಗಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರೇಷ್ಮಾ ಹಾಗೂ ದುರ್ಗಾಂಬ ಹೆಸರಿನ ಖಾಸಗಿ ಬಸ್ ಗಳೆರಡು ರಸ್ತೆ ತಡೆಗೆ ಕಾರಣವಾದವುಗಳು. ಬಹಳಷ್ಟು ಹೊತ್ತು ರಸ್ತೆ ತಡೆಯಾಗುತ್ತಿದ್ದಂತೆ ಆಕ್ರೋಶಗೊಂಡ ಸಾರ್ವಜನಿಕರು ಬಸ್ ಚಾಲಕ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಮಳೆ ಬರುತ್ತಿದ್ದ ಹೊತ್ತಲ್ಲಿ ವಾಯುವೇಗದಿಂದ ಪೈಪೊಟಿಯಿಂದ ಬರುವ ಮೂಲಕ ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಲ್ಲದೆ, ಹೆದ್ದಾರಿಗಡ್ಡವಾಗಿ ಬಸ್ ಗಳನ್ನು ನಿಲ್ಲಿಸುವ ಮೂಲಕ ರಸ್ತೆ ತಡೆಗೆ ಕಾರಣವಾದ ಎರಡೂ ಬಸ್ ಗಳ ವಿರುದ್ಧ ಪಡುಬಿದ್ರಿ ಠಾಣೆಗೆ ದೂರು ನೀಡುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.