ಪಡುಬಿದ್ರಿ: ತೀವ್ರಗೊಂಡ ಕಡಲ್ಕೊರೆತ: ತೆಂಗಿನ ಮರ ಸಮುದ್ರ ಪಾಲಾಗುವ ಸಾಧ್ಯತೆ

ಪಡುಬಿದ್ರಿ ನಡಿಪಟ್ಣ ಪ್ರದೇಶದಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದ್ದು ಮೀನುಗಾರಿಕಾ ಶೆಡ್ ಸಹಿತ ಹತ್ತಾರು ತೆಂಗಿನ ಮರಗಳು ಸಮುದ್ರ ಪಾಲಾಗುವ ಸಾಧ್ಯತೆ ನಿಶ್ಚಲವಾಗಿದ್ದೂ ಜನಪ್ರತಿನಿಧಿಗಳು ಸಹಿತ ಅಧಿಕಾರಿಗಳು ನಮ್ಮ ಮನವಿಗೆ ಪೂರಕವಾಗಿ ಸ್ಪಂಧಿಸಿಲ್ಲ ಎಂಬುದಾಗಿ ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 ಈ ಬಗ್ಗೆ ಮಾತನಾಡಿದ ಮೀನುಗಾರ ನೂತನ್ ಪುತ್ರನ್, ಹತ್ತಾರು ದಿನಗಳಿಂದ ಈ ಪ್ರದೇಶದಲ್ಲಿ ಕಡಲು ಕೊರೆತ ಈ ಭಾಗದ ಮೀನುಗಾರರಾದ ನಮ್ಮನ್ನು ಬಾಧಿಸುತ್ತಿದೆ, ಈ ಬಗ್ಗೆ ಈ ಭಾಗದ ಶಾಸಕರು, ಸಂಸದರಿಗೆ ಕರೆ ಮಾಡಿ ನಾವು ಸುಸ್ತಾದೆವು ವಿನಹಃ ನಮ್ಮ ಮನವಿಗೆ ಸ್ಪಂಧಿಸಿ ಊರಲ್ಲಿದ್ದರೂ ಭೇಟಿ ನೀಡುವ ಸೌಜನ್ಯವೂ ತೋರಿಸಿಲ್ಲ, ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದರೂ ಪೂಕರವಾಗಿ ನಮ್ಮ ಮನವಿಗೆ ಸ್ಪಂದಿಸಿಲ್ಲ, ನಾಮ್ಕಾವಸ್ಥೆಗೂ ಎಂಬಂತೆ ಏನೂ ಸಾಲುದು ಎಂಬಂತ್ತ ಕೇವಲ ಆರು ಟಿಪ್ಪರ್ ಕಲ್ಲು ತಂದು ಹಾಕಲಾಗಿದೆ. ಇದರಿಂದ ನಮ್ಮ ಮೀನುಗಾರಿಗೆ ಶೇಖರಣಾ ಕೊಠಡಿ ಸಹಿತ ಈ ಭಾಗದ ಹತ್ತಾರು ತೆಂಗಿನ ಮರಗಳನ್ನು ಉಳಿಸಲು ಸಾಧ್ಯವಿಲ್ಲ. ಕಡಲು ಕೊರೆತ ಹೀಗೆಯೇ ಮುಂದುವರಿದರೆ ರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂ ಪ್ಲ್ಯಾಗ್ ಬೀಚಿಗೆ ಸಂಪರ್ಕ ಕೊಂಡಿಯಾಗಿರುವ ಮೀನುಗಾರಿಕಾ ರಸ್ತೆಯೂ ಕಡಲ ಒಡಲು ಸೇರಲು ಹೆಚ್ಚು ಸಮಯ ಬೇಕಾಗಿಲ್ಲ, ಮತ್ತೂ ಮುಂದುವರಿದರೆ ಕಡಲು ಸಹಿತ ನದಿಯೂ ಹತ್ತಿರದಲ್ಲೇ ಇರುವ  ಇಲ್ಲಿ… ಅದು ಒಂದಕ್ಕೊಂದು ಸಂಗಮಗೊಂಡರೆ ಈ ನಡಿಪಟ್ಣ ಪ್ರದೇಶವೇ ಇಲ್ಲವಾಗುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related Posts

Leave a Reply

Your email address will not be published.