ಪಡುಬಿದ್ರಿ :ಸರ್ಕಾರಿ ಶಾಲಾ ಮೈದಾನವಿಲ್ಲಿ ಜಲ್ಲಿಕಲ್ಲು ಶೇಖರಣಾ ಘಟಕ-ತೆರವಿಗೆ ಹಳೆವಿದ್ಯಾರ್ಥಿಗಳಿಂದ ವಾರದ ಗಡುವು
ಪಡುಬಿದ್ರಿ ಕರ್ಣಾಟಕ ಪಬ್ಲಿಕ್ ಸ್ಕೂಲ್ ಆಟದ ಮೈದಾನ ಜಲ್ಲಿಕಲ್ಲು, ಕ್ರಷರ್ ಹುಡಿ ಶೇಖರಣಾ ಘಟಕವಾಗಿ ಬದಲಾಗಿದ್ದು, ಈ ಬಗ್ಗೆ ಆಕ್ರೋಶಿತರಾದ ಶಾಲಾ ಹಳೆ ವಿದ್ಯಾರ್ಥಿಗಳು ಒಂದು ವಾರದೊಳಗೆ ತೆರವುಗೊಳಿಸದಿದ್ದಲ್ಲಿ ನಾವು ಅದನ್ನು ಬೇರೆಗೆ ವರ್ಗಾಹಿಸುವ ಕೆಲಸ ಮಾಡಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.
ರಸ್ತೆ ದುರಸ್ಥಿಗಾಗಿ ಕಾರ್ಕಳ ಮೂಲದ ಗುತ್ತಿಗೆದಾರನೊರ್ವ ಕಳೆದ ಒಂದು ತಿಂಗಳ ಹಿಂದೆ ರಾಶಿ ರಾಶಿ ಜಲ್ಲಿಕಲ್ಲು ಸಹಿತ ಕ್ರೆಷರ್ ಹುಡಿಯನ್ನು ತಂದು ಮೈದಾನಕ್ಕೆ ಸುರಿದಿದ್ದು, ಮಕ್ಕಳಿಗೆ ತೊಂದರೆಯಾಗುವುದರಿAದ ಇದನ್ನು ತೆರವುಗೊಳಿಸುವಂತೆ ಈ ಭಾಗದ ಗ್ರಾ.ಪಂ ಸದಸ್ಯರು ಗುತ್ತಿಗೆದಾರನಿಗೆ ತಿಳಿಸಿದ್ದರೂ ಅವರ ಮಾತಿಗೆ ಮನ್ನಣೆ ನೀಡದ ಗುತ್ತಿಗೆದಾರ ಇದೀಗ ಮೊಬೈಲ್ ಸ್ವೀಚ್ ಆಫ್ ಮಾಡಿ ಸದಸ್ಯರಿಗೆ ಸಡ್ಡು ಹೊಡೆದ್ದಿದ್ದು, ಇದರಿಂದ ಆಕ್ರೋಶಿತರಾದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ವಾರದೊಳಗೆ ತೆರವುಗೊಳಿಸದಿದ್ದಲ್ಲಿ ಮುಂದೆ ನಡೆಯ ಬಹುದಾದ ಯಾವುದೇ ಕಷ್ಟ ನಷ್ಟಗಳಿಗೆ ಅಕ್ರಮವಾಗಿ ಶಾಲಾ ಮೈದಾನದಲ್ಲಿ ಜಲ್ಲಿಕಲ್ಲು ಶೇಖರಣೆ ಮಾಡಿದ ಗುತ್ತಿಗೆದಾರನೇ ಹೊಣೆ ಎಂಬುದಾಗಿ ಎಚ್ಚರಿಸಿದ್ದಾರೆ