ಪಡುಬಿದ್ರಿ : ಡಾಮಾರು ಹುಡಿಯನ್ನು ರಸ್ತೆಯಲ್ಲೇ ಬಿಟ್ಟ ಪರಿಣಾಮ ಅಪಘಾತ ಹೆಚ್ಚಳ

ಹೆದ್ದಾರಿಗೆ ಹಾಕಲಾದ ಡಾಮಾರಿನ ಒಂದು ಪದರವನ್ನು ಯಂತ್ರದ ಮೂಲಕ ತೆಗೆಯುತಿದ್ದು, ತೆಗೆದ ಡಾಮಾರು ಹುಡಿಯನ್ನು ರಸ್ತೆಯಲ್ಲೇ ಬಿಟ್ಟು ಹೋದ ಪರಿಣಾಮ ದ್ವಿಚಕ್ರ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಘಟನೆ ಪಡುಬಿದ್ರಿಯ ಬೀಡು ಬಳಿ ರಾತ್ರಿ ನಡೆದಿದೆ.
ಮಂಗಳೂರು ಕಡೆಯಿಂದಲೂ ಹೆದ್ದಾರಿ ಡಾಮಾರಿನ ಪದರವನ್ನು ಯಂತ್ರದ ಮೂಲಕ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ರಾತ್ರಿ ಹೊತ್ತು ರಸ್ತೆಯ ಸುಸ್ಥಿತಿ ಗಮನಕ್ಕೆ ಬಾರದೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದ ಬೈಕ್ ಸವಾರರು ಉರುಳುತ್ತಿದ್ದಾರೆ.

ಹೆದ್ದಾರಿ ಅಧಿಕಾರಿಗಳಲ್ಲಿ ವಿಚಾರಿಸಿದರೆ ಎರಡು ದಿನದಲ್ಲಿ ಮರು ಡಾಮಾರೀಕರಣ ನಡೆಯಲಿದೆ ಎನ್ನುತ್ತಾರೆ. ಅಂದರೆ ಎರಡು ದಿನಗಳಲ್ಲಿ ಹೆದ್ದಾರಿಯಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.