ಅಪಾಯಕಾರಿ ಬಂಡೆ ಕಲ್ಲು ಸಾಗಾಟ ನಿಯಂತ್ರಿಸಿ: ಸಾಮಾಜಿಕ ಕಾರ್ಯಕರ್ತ ಮೊಯ್ದಿನಬ್ಬ
ಬೃಹತ್ ಬಂಡೆಕಲ್ಲುಗಳನ್ನು ಟಿಪ್ಪರ್ ಗಳಲ್ಲಿ ಕಾನೂನು ಬಾಹಿರವಾಗಿ ಅಪಾಯಕಾರಿ ಸ್ಥಿತಿಯಲ್ಲಿ ಸಾಗಿಸುತ್ತಿದ್ದು, ಜನರ ಪ್ರಾಣಕ್ಕೆ ಕುತ್ತುತರುವ ಇಂಥಹ ಪ್ರಕ್ರಿಯೆಗೆ ಸಾರಿಗೆ ಇಲಾಖೆ ಕಡಿವಾಣ ಹಾಕ ಬೇಕಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಎಂ.ಪಿ. ಮೊಹಿದ್ಧಿನಬ್ಬ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಡಪಾಯಿಗಳಿಂದ ಸಂಚಾರದಲ್ಲಿ ಸಣ್ಣಪುಟ್ಟ ತೊಡಕುಗಳಾದರೂ ಸಾರಿಗೆ ಇಲಾಖೆ ಸಹಿತ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಇಂಥಹ ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಈ ಅಪಾಯಕಾರಿ ಬಂಡೆ ಸಾಗಾಟಕ್ಕೆ ಏಕೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ, ಕಾರ್ಕಳ ರಾಜ್ಯ ರಸ್ತೆಯಾಗಿ ರಾಷ್ಟಿçÃಯ ಹೆದ್ದಾರಿ ಪ್ರವೇಶಿಸಿ ಬೇಕಾಬಿಟ್ಟಿ ಓಡಾಟ ನಡೆಸುತ್ತಿರುವ ಟಿಪ್ಪರ್ ಗಳು ಸಿರಿವಂತರಿಗೆ ಸೇರಿದ್ದು ಎಂಬ ಕಾರಣಕ್ಕೆ ಕಾನೂನು ಪಾಲನೆಯಲ್ಲಿ ತಾರತಮ್ಯವೇ.. ಇಂಥಹ ಮಲತಾಯಿ ಧೋರಣೆ ಬದಿಗೊತ್ತಿ ಕಾನೂನು ಅಸ್ತ್ರ ಎಲ್ಲರಿಗೂ ಒಂದೇ ರೀತಿಯಲ್ಲಿ ಪ್ರಯೋಗವಾಗಲಿ ಎಂಬುದಾಗಿ ಅವರು ಆಗ್ರಹಿಸಿದ್ದಾರೆ.