ಪಡುಕುಡುರು ಗ್ರಾಮದ ಹಳೆಮಜಲು ನಿವಾಸಿಯ ಕರುಣಾಜನಕ ಕಥೆ

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಪಡುಕುಡುರು ಗ್ರಾಮದ ಒಳಗುಡ್ಡೆ ,ಹಳೆಮಜಲು ನಿವಾಸಿ ಪ್ರೇಮ ಪೂಜಾರ್ತಿ ವಾಸಿಸುವ ಮನೆಗೊಂದು ಬಾಗಿಲಿಲ್ಲ, ಕಿಟಕಿಗಳಂತೂ ಇಲ್ಲವೇ ಇಲ್ಲ,ಶೌಚಲಯಕ್ಕೆ ಬಯಲೇ ಗತಿ, ಒಂದೊತ್ತು ಊಟಕ್ಕೂ ಗತಿಯಿಲ್ಲದೇ ಪ್ರೇಮಕ್ಕನ ಬದುಕು ನಿಜಕ್ಕೂ ಕರುಳು ಹಿಂಡಿಸುವOತಹದ್ದು. ಕೆಲವು ವರುಷಗಳ ಹಿಂದೆ ಬಂಡೆಗಳ ಮೇಲೆ ವಾಸ ಮಾಡುತ್ತಿದ್ದ ಪ್ರೇಮಕ್ಕನ ಪರಿಸ್ಥಿತಿ ಕಂಡು ಕೆಲವು ಸಾಮಾಜಿಕ ಕಾರ್ಯಕರ್ತರು ಪುಟ್ಟದ್ದೊಂದು ಸೂರು ಕಟ್ಟಿಕೊಡಲು ಮುಂದಾಗಿದ್ದರು.ಅರ್ಧ ಮನೆ ಕಟ್ಟುತ್ತಿದ್ದ ಸಂಧರ್ಭ ಕೆಲವೊಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ರೇಮಕ್ಕನಿಗೆ ಸೂರು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು .ಅದ್ರೆ ಅಂದು ಭೇಟಿ ಕೊಟ್ಟ ಜನಪ್ರತಿನಿಧಿಗಳು ಮತ್ತೆ ಪ್ರೇಮಕ್ಕನ ಮನೆಯತ್ತ ತಿರುಗಿಯೂ ನೋಡಿಲ್ಲ,ಅಧಿಕಾರಿಗಳಂತೂ ಈ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ.

An old resident

ಅಧಿಕಾರಿಗಳು ಇಂದು ಬರ್ತಾರೆ… ನಾಳೆ ಬರ್ತಾರೆ.. ಅಂತಾ ಪ್ರೇಮಕ್ಕ ಕಾದಿದ್ದೆ ಬಂತು ,ಅದ್ರೆ ಭರವಸೆ ಕೊಟ್ಟ ಅಧಿಕಾರಿಗಳು ಕೈಕೊಟ್ಟರೆ ಅಲ್ಲಿನ ಜನಪ್ರತಿನಿಧಿಗಳು ಮರೆತೆ ಬಿಟ್ಟರು ಪ್ರೇಮಕ್ಕನ ಮನೆ ಕೆಲಸ ಅರ್ಧಕ್ಕೆ ನಿಂತೇ ಹೋಯಿತು . ಮುಗ್ದೆ ಪ್ರೇಮ ಪೂಜಾರ್ತಿ ಕಾಡಂಚಲ್ಲಿ ಬಾಗಿಲ್ಲದ ಮನೆಯಲ್ಲಿ ,ಬೆಳಕಿಲ್ಲದ ರಾತ್ರಿಗಳನ್ನು ಭಯದಿಂದ ಕಳೆಯುವಂತಾಗಿದೆ,ಮನೆ ಬಾಗಿಲು ಇಲ್ಲದ ಕಾರಣ, ರಾತ್ರಿ ಹಾವುಗಳ ಕಾಟ ಒಂದೆಡೆಯಾದ್ರೆ ಮತ್ತೊಂದೆಡೆ ಕಾಡು ಪ್ರಾಣಿಗಳ ಕಾಟ.ಹೀಗಾಗಿ ರಾತ್ರೀಯಿಡಿ ನಿದ್ದೆಯಿಲ್ಲದೇ ..ಕಾಡು ಪ್ರಾಣಿಗಳ ಭಯದಿಂದ ಬದುಕುವಂತಾಗಿದೆ

An old resident

ಬಾಲ್ಯದಿOದಲೂ ತನ್ನ ಎರಡು ಕೈಗಳ ಕೈ ಬೆರಳು ಹಾಗೂ ಕಾಲು ಬೆರಳುಗಳು ಇಲ್ಲದಿರುವುದರಿಂದ ದುಡಿಮೆಗೂ ಹೋಗುವಂತಿಲ್ಲ ,ಅಕ್ಕ ಪಕ್ಕದ ಮನೆಯವರು ನೀಡುವ ಆಹಾರದಿಂದ ಬದುಕು ಸಾಗಿಸುವಂತಾಗಿದೆ.ಸರಕಾರದಿAದ ಬರುವ ಮಾಸಿಕ ಮುನ್ನೂರು ರೂಪಾಯಿಯೇ ಇವರಿಗೆ ಸಧ್ಯಕ್ಕಿರುವ ಅದಾಯ.

ಹೇಳಿಕೇಳಿ.. ಪವರ್ ಮಿನಿಸ್ಟರ್ ಕ್ಷೇತ್ರದ ನಿವಾಸಿ ಪ್ರೇಮ ಪೂಜಾರ್ತಿ ,ಸಾಲದಕ್ಕೆ ಅವರದ್ದೇ ಸಮುದಾಯಕ್ಕೆ ಕೂಡ ಸೇರಿದವರು.ಸಚಿವರು ಈ ಬಡ ಪ್ರೇಮಕ್ಕನ ಸಂಕಷ್ಟಕ್ಕೆ ಕೈ ಜೋಡಿಸಬೇಕಾಗಿದೆ.ಪುಟ್ಟ ಸೂರು ಪೂರ್ತಿ ಗೊಳಿಸಲು ನೆರವಾಗಬೇಕಾಗಿದೆ. ಸರಕಾರ ಮಾಡುತ್ತೋ ಬಿಡುತ್ತಾ ಗೊತ್ತಿಲ್ಲ ಅದ್ರೆ ಎಲ್ಲರೂ ಸೇರಿ ಪ್ರೇಮಕ್ಕಗೆ ಸೂರು ಕಟ್ಟಿಕೊಡುವ ಪ್ರಯತ್ನ ಮಾಡಬೇಕಾಗಿದೆ .ದಾನಿಗಳು ಪ್ರೇಮಕ್ಕನ ಮನೆ ಕಟ್ಟಲು ಕೈ ಜೋಡಿಸಬೇಕಾಗಿದೆ.

ಪ್ರೇಮಕ್ಕನಿಗೆ ಧನ ಸಹಾಯ ಮಾಡಲಿಚ್ಚಿಸುವವರು ಅವರ ಬ್ಯಾಂಕ್ ಖಾತೆಗೆ ಧ ಸಹಾಯ ಮಾಡಬಹುದು

An old resident

Name prema

Account Number : 022522010000050
IFSC CODE : UBIN0902250

BANK : UNION BANK

BRANCH : SOMESHWARA ROAD, MUDRADI, UDUPI DISTRICT

Related Posts

Leave a Reply

Your email address will not be published.