ಹಿಂದೂ ಪಾಕಿಸ್ತಾನದ ದೊಡ್ಡ ಅಲ್ಪಸಂಖ್ಯಾಕ ಸಮುದಾಯ

ಪಾಕಿಸ್ತಾನದಲ್ಲಿ ಅಧಿಕೃತ ಜನಗಣತಿಯ ವರದಿ ಡಾನ್ ಪತ್ರಿಕೆ ಮೂಲಕ ವರದಿಯಾಗಿದ್ದು, ಹಿಂದೂ ಮತ್ತು ಕ್ರಿಶ್ಚಿಯನರ ಸಂಖ್ಯೆಯು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಈಗ ಪಾಕಿಸ್ತಾನದಲ್ಲಿ ಹಿಂದೂಗಳು ಅತಿ ದೊಡ್ಡ ಅಲ್ಪಸಂಖ್ಯಾಕ ಸಮುದಾಯವಾಗಿದ್ದಾರೆ. ಪಾಕಿಸ್ತಾನದ ಜನಸಂಖ್ಯೆಯು ಈಗ ೨೪.೦೮ ಕೋಟಿ. ಮುಸ್ಲಿಂ ಜನಸಂಖ್ಯೆಯು ೨೦೧೭ರಲ್ಲಿ ೯೬.೪೬ ಶೇಕಡಾ ಇದ್ದುದು ೯೬.೩೫ ಶೇಕಡಾಕ್ಕೆ ತುಸು ಕೆಳ ಸರಿದಿದೆ. ಹಿಂದೂಗಳ ಜನಸಂಖ್ಯೆಯು ೨೦೧೭ರಲ್ಲಿ ೩೫ ಲಕ್ಷ ಇದ್ದುದು ೨೦೨೩ರಲ್ಲಿ ೩೮ ಲಕ್ಷಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕ್ರಿಶ್ಚಿಯನರ ಜನಸಂಖ್ಯೆಯು ೨೬ ಲಕ್ಷದಿಂದ ೩೩ ಲಕ್ಷಕ್ಕೆ ಹೆಚ್ಚಳ ಕಂಡಿದೆ. ಪಾಕಿಸ್ತಾನದ ಇನ್ನುಳಿದ ಪ್ರಮುಖ ಅಲ್ಪಸಂಖ್ಯಾಕರು ಎಂದರೆ ಅಹಮದೀಯ ೧.೬೨ ಲಕ್ಷ, ಸಿಖ್ ೧೫,೯೯೮, ಪಾರಸಿ ೨,೩೪೮, ಲಿಂಗತ್ವ ಅಲ್ಪಸಂಖ್ಯಾಕರು ೨೦,೩೩೧ ಇದ್ದಾರೆ. ಲಿಂಗತ್ವ ತಾರತಮ್ಯ ಮುಂದುವರಿದಿದೆ. ಸಾವಿರ ಗಂಡಸರಿಗೆ ೯೫೭ರಷ್ಟು ಮಹಿಳೆಯರು ಇದ್ದಾರೆ.

add - Rai's spices

Related Posts

Leave a Reply

Your email address will not be published.