ಪಣಂಬೂರು ಬೀಚ್‍ನ ಹೊಟೇಲ್‍ಗಳಿಗೆ ದಾಳಿ ನಡೆಸಿದ ಜಿಲ್ಲಾಧಿಕಾರಿ ಎಂ.ಆರ್. ರವಿ ಕುಮಾರ್

ಮಂಗಳೂರು: ಪಣಂಬೂರು ಬೀಚ್‍ನ ಹೊಟೇಲ್‍ಗಳಿಗೆ ಏಕಾ ಏಕಿ ದಾಳಿ ನಡೆಸಿರುವ ಜಿಲ್ಲಾಧಿಕಾರಿ ಎಂ.ಆರ್. ರವಿ ಕುಮಾರ್ ಹೊಸ ವರ್ಷದಂದೇ ಹೊಸ ಸಂಚಲನ ಮೂಡಿಸಿದ್ದಾರೆ. ಬೀಚ್ ಬಳಿಯಲ್ಲಿರುವ ಹಲವು ಹೊಟೇಲ್, ಫಾಸ್ಟ್ ಫುಡ್ ಅಗಡಿಗೆ ತೆರಳಿ ಅಲ್ಲಿನ ಕಿಚನ್ ಪರಿಶೀಲಿಸಿದಾಗ ಶುಚಿತ್ವವೇ ಇಲ್ಲದ ವ್ಯವಸ್ಥೆ ಕಂಡು ಬಂದಿತ್ತು.

ಅಲ್ಲದೇ ಶುಚಿತ್ವ ಇಲ್ಲದ ಕಿಚನ್, ಹಲವು ಬಾರಿ ಬಳಸಿದ ಎಣ್ಣೆ, ಇಲಿ ಕಚ್ಚಿದ ತರಕಾರಿಗಳು ಅಲ್ಲಿ ಕಂಡು ಬಂದವು. ಅಲ್ಲದೇ ಅಂಗಡಿ ಮಾಲಕರ ಬಳಿ ಪರವಾನಗಿ ಕೇಳಿದಾಗ ಅದೂ ಅವರ ಬಳಿ ಇದ್ದಿರಲಿಲ್ಲ. ಶೌಚಾಲಯವೇ ಸಿಬ್ಬಂದಿಗಳ ಕೋಣೆ: ಇನ್ನು ಇಲ್ಲಿನ ಸುಲಭ್ ಶೌಚಾಲಯದ ಒಂದು ಭಾಗವನ್ನು ವಿಐಪಿ ಶೌಚಾಲಯ ಎಂದು ಬೋರ್ಡ್ ಹಾಕಿ ಅಲ್ಲಿ ಸಿಬ್ಬಂದಿಗಳು ವಾಸ ಮಾಡುತ್ತಿರುವ ದೃಶ್ಯಗಳು ಕೂಡಾ ಕಂಡು ಬಂದವು.

ಕ್ಯಾಬೇಜ್‍ನಿಂದಲೆ ಗೋಬಿ! ಇಲ್ಲಿನ ಫಾಸ್ಟ್ ಫುಡ್ ಅಂಗಡಿಯೊಂದರಲ್ಲಿ ಕ್ಯಾಬೇಜನ್ನೇ ಗೋಬಿಯಾಗಿ ಬಳಸುತ್ತಿರುವುದು ಪತ್ತೆಯಾಗಿದೆ. ಅಲ್ಲದೇ ಕಬ್ಬಿನ ಜ್ಯೂಸ್, ಚರ್ಮುರಿ ಅಂಗಡಿಯವರಿಗೂ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.