ಪಾವಂಜೆ: ತುಳುನಾಡಿನ ಸಾಂಪ್ರದಾಯಿಕ ಕೆಡ್ಡಸ ಆಚರಣೆ: ನಂದಿನಿ ಕ್ರಿಕೆಟರ್ಸ್ ಅರಂದ್‌ದ ವಾರ್ಷಿಕೋತ್ಸವ

ನಂದಿನಿ ಕ್ರಿಕೆಟರ್ಸ್ ಅರಂದ್ ವತಿಯಿಂದ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ಕೆಡ್ಡಸ ಹಾಗೂ ಸಂಘಟನೆಯ ವಾರ್ಷಿಕೋತ್ಸವವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ್ ಪೂಜಾರಿ ಚೇಳಾಯರುರವರು ವಹಿಸಿ ಹಿರಿಯರು ನಡೆಸುತ್ತಾ ಬಂದ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿಕೊಳ್ಳುವ ಯುವ ಸಂಘಟನೆಯ ಪಾತ್ರ ನಿಜಕ್ಕೂ ಶ್ಲಾಘನೀಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ದೇವಿ ದಯಾಳ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಲೀಕರಾದ ಶ್ರೀ ದೇವಿ ದಯಾಳ್ ಶೆಟ್ಟಿಯವರು ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಂತಿ, ಶ್ರೀ ಸತ್ಯ ಧರ್ಮ ದೇವಿ ದೇವಸ್ಥಾನ ಮುಕ್ಕ ಇಲ್ಲಿನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಮಾನಾಥ್ ಸಿ. ಅಮೀನ್, ಕುಮಾರದನ್ನ ಕುಮೇರ್ ಅರಂದ್ ಮುಕ್ಕ ಇದರ ಅಧ್ಯಕ್ಷರಾದ ಶ್ರೀ ನವೀನ್ ಚೇಳಾಯರು, ನಂದಿನಿ ಕ್ರಿಕೆಟರ್ಸ್ ಅರಂದ್ ಇದರ ಗೌರವಾಧ್ಯಕ್ಷರಾದ ಶ್ರೀ ವಿಠಲ ದೇವಾಡಿಗ, ಅಧ್ಯಕ್ಷರಾದ ಶ್ರೀ ಪುರುಷೋತ್ತಮ ದೇವಾಡಿಗ, ತಂಡದ ಕಪ್ತಾನ ಶ್ರೀ ಗೌತಮ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಕ್ಕ ಪ್ರೋಟೀನ್ಸ್ ಮತ್ತು ಭಾವ ಫಿಶ್ ಮಿಲ್ಲ್ ಸಹಕಾರದೊಂದಿಗೆ ಆರು ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ, ಆಕಾಶ್, ಸಹನಿಕ, ತ್ರಿಷಾ ನಳಿನಿ ದೇವಾಡಿಗ, ಮೋಕ್ಷಿತ್, ಧನುಷ್ ಲಕ್ಷ್ಮಣ್ ಮತ್ತು ಪ್ರಕೃತಿ ಇವರಿಗೆ ಸುಮಾರು ರೂ-೫೦,೦೦೦/-ಮೊತ್ತದ ಸ್ಕಾಲರ್ ಶಿಪ್ ವಿತರಣೆ ಮಾಡಲಾಯಿತು.
ಸಂಸ್ಥೆಯ ಸದಸ್ಯರು ಮತ್ತು ಕುಟುಂಬ ವರ್ಗದ ಸಾಧಕರನ್ನು ಗೌರವಿಸುವ ಸಲುವಾಗಿ ವೈದ್ಯಕೀಯ ಕ್ಷೇತ್ರದ ಸಾಧಕರಾದ ಪ್ರಕೃತಿ ಪ್ರದೀಪ್ ಪೂಜಾರಿ, ಕ್ರೀಡಾಕ್ಷೇತ್ರದ ರಾಷ್ಟ್ರಮಟ್ಟದ ಸಾಧಕರುಗಳಾದ ಯಶವಂತ್ ಮತ್ತು ಸಂಪತ್ ಬೈಲಕೆರೆ ಉಡುಪಿ ಇವರಿಗೆ ಗೌರವಪೂರ್ಣವಾದ ಸನ್ಮಾನವನ್ನು ನೆರವೇರಿಸಲಾಯಿತು.
2024-2025ರ ತಂಡದ ಸಕ್ರಿಯ ಸದಸ್ಯರಾಗಿ ಶ್ರೀ ರೋಷನ್ ದೇವಾಡಿಗ ಮತ್ತು ರೋಹಿತ್ ರವರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೀತಾರಾಮಚಂದ್ರ ಅವರು ಪ್ರಾರ್ಥನೆಯನ್ನು ನೆರವೇರಿಸಿ, ಶಿವರಾಜ್ ರವರು ಬಹುಮಾನ ವಿಜೇತರ ಪಟ್ಟಿಯನ್ನು ಮಂಡಿಸಿದರು, ಕಾರ್ಯಕ್ರಮವನ್ನು ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ನಿರೂಪಿಸಿದರು.