ತಪ್ಪಿದರೆ ಸುನಿಲ್ ಪೇ ಪೋಸ್ಟರ್ ಬಿಡುಗಡೆ : ಕಾಂಗ್ರೆಸ್ ವಕ್ತಾರ ಶುಭದರಾವ್ ಎಚ್ಚರಿಕೆ
ವಿಪಕ್ಷ ನಾಯಕರಾದ ಸಿದ್ದರಾಮಯ್ಯರನ್ನು ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿರುವ ಸಚಿವ ಸುನೀಲ್ ಕುಮಾರ್ ಅವರು ಭ್ರಷ್ಟಾಚಾರ ದಾಖಲೆ ಬಹಿರಂಗಪಡಿಸಬೇಕು ಇಲ್ಲವೆ ಕ್ಷಮೆಯಾಚಿಸಬೇಕು ತಪ್ಪಿದ್ದಲ್ಲಿ PAYCM ಮಾದರಿಯಲ್ಲಿ SUNILPAY ಪೋಸ್ಟರ್ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯರವರು ಈ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ, ಯಾವುದೇ ಲೋಪಗಳಿಲ್ಲದ ಭ್ರಷ್ಟಾಚಾರ ರಹಿತ ಪೂರ್ಣ ಅವಧಿಯ ಆಡಳಿತ ನೀಡಿದ ಹೆಗ್ಗಳಿಕೆ ಅವರದ್ದು, ಅವರ ಜನಪರ ಯೋಜನೆಗಳಿಂದ ಕೋಟ್ಯಾಂತರ ಜನರು ನೆಮ್ಮದಿಯ ಬದುಕು ಬದುಕ್ಕಿದ್ದಾರೆ, ಅಂತವರನ್ನು ನೀವು ಮಾದರಿಯಾಗಿ ಸ್ವೀಕರಿಸಬೇಕೇ ಹೊರತು ಆದಾರ ರಹಿತ ಅರೋಪ ಮಾಡುವುದಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ
ಇತೀಚಿನ ದಿನಗಳಲ್ಲಿ ತಾವು ನಮ್ಮ ಪಕ್ಷ ಮತ್ತು ಪಕ್ಷದ ನಾಯಕರ ಬಗ್ಗೆ ಹೀನಾಯವಾಗಿ ಮಾತನಾಡುವುದನ್ನು ರೂಡಿ ಮಾಡಿಕೊಂಡಿದ್ದೀರಿ ಅಧಿಕಾರ ಶಾಶ್ವತವಲ್ಲ ಜವಾಬ್ದಾರಿ ಸ್ಥಾನದಲ್ಲಿರುವವರ ಭಾಷೆ ಹಿಡಿತದಲ್ಲಿದ್ದರೆ ಒಳ್ಳೆಯದು ಇಲ್ಲವಾದರೆ ನಿಮ್ಮ ದಾಟಿಯಲ್ಲಿ ಉತ್ತರಿಸಲು ನಾವೂ ಸಿದ್ದರಿದ್ದೇವೆ ಎಂದು ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸುಧಾಕರ್ ಶೆಟ್ಟಿ, ಮಾಳ ಪಂಚಾಯತ್ ಮಾಜಿ ಅದ್ಯಕ್ಷರಾದ ಅಜಿತ್ ಹೆಗ್ಡೆ, ಯುವ ಕಾಂಗ್ರೇಸ್ ಅದ್ಯಕ್ಷರಾದ ಯೋಗೀಶ್ ಇನ್ನಾ ಉಪಸ್ಥಿತರಿದ್ದರು.