ಪೆರುವಾಜೆ : ಗ್ರಾಮವಾಸ್ತವ್ಯ ಕಾರ್ಯಕ್ರಮ

ಸುಳ್ಯ ತಾಲೂಕು ಆಡಳಿತ ವತಿಯಿಂದ ಮತ್ತು ಸುಳ್ಯ ತಾಲೂಕು ವಿವಿಧ ಇಲಾಖಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಪೆರುವಾಜೆಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮ ವಾಸ್ತವ್ಯದ ಅಧ್ಯಕ್ಷತೆಯನ್ನು ಜಗನಾಥ ಪೂಜಾರಿ ವಹಿಸಿದ್ದರು. ತಹಸೀಲ್ದಾರ್ ರಾದ ಶ್ರೀ. ಅನಿತಲಕ್ಷ್ಮಿ ದೀಪಬೆಳಗಿಸುವ ಮೂಲಕ ಗ್ರಾಮ ಸಭೆಗೆ ಚಾಲನೆ ನೀಡಿದ್ದರು

. ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಇಒ ಭಾವನಿಶಂಕರ್ ಕೇತ್ರ ಶಿಕ್ಷಣಧಿಕಾರಿ ಮಹದೇವ್ ತಾಲೂಕು ಹೆಲ್ತ್ ಆಫೀಸರ್ ನಂದಕುಮಾರ್, ಅರಣ್ಯ ಇಲಾಖೆಧಿಕಾರಿಗಳದ, ಆರ್‍ಎಫ್‍ಓ ಕಿರಣ್ ಪೆರುವಾಜೆ, ಗ್ರಾಮಪಂಚಾಯಿತಿ ಪೆರುವಾಜೆ ಸದಸ್ಯರು ಮತ್ತು ಇಲಾಖೆಯ ಸಿಬ್ಬಂದಿ ವರ್ಗ, ಪೆರುವಾಜೆ ಗ್ರಾಮಸ್ಥರು ಉಪಸ್ಥಿತರಿದ್ದರು.