ಪೆರುವಾಜೆ ನಾಗನ ಮಜಲ್ ಎಂಬಲ್ಲಿ ರಸ್ತೆಯಲ್ಲಿ ಬಿರುಕು : ಏಳೆಂಟು ಮನೆಗಳಿಗೆ ಸಂಪರ್ಕ ಕಡಿತದ ಭೀತಿ
ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮೂರನೇ ವಾರ್ಡಿನ ನಾಗನ ಮಜಲ್ ಎಂಬಲ್ಲಿ ರಸ್ತೆ ಬಿರುಕು ಬಿಟ್ಟಿದ್ದು ಸುಮಾರು ಏಳೆಂಟು ಮನೆಗಳಿಗೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ತಕ್ಷಣ ಅಧಿಕಾರಿಗಳು ತುರ್ತು ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಅಗ್ರಹಿಸಿದ್ದಾರೆ. ಕುಡಿಯೋ ನೀರಿನ ಜಾಕ್ವೆಲ್ ಇದ್ದು ಅದಕ್ಕೆ ಅಳವಡಿಸಿದ ಟಿಸಿಯು ಅಪಾಯಕಾರಿ ಕುಸಿಯುವ ಭೀತಿಯಲ್ಲಿದೆ. ಟಿಸಿಯ ಹತ್ತಿರದ ಮನೆಯ ಅಂಗಳ ಕೂಡ ಬಿರುಕು ಬಿಟ್ಟಿದ್ದು ಅಪಾಯದ ಹಂತದಲ್ಲಿದೆ ತಕ್ಷಣ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.