ಕರಾವಳಿಯಾದ್ಯಂತ ಪಿರ್ಕಿಲು ಸಿನಿಮಾ ಮೇ 26ರಂದು ಬಿಡುಗಡೆ
ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಎಚ್.ಡಿ .ಆರ್ಯ ನಿರ್ದೇಶನದಲ್ಲಿ ತಯಾರಾದ `ಪಿರ್ಕಿಲು’ ತುಳು ಸಿನಿಮಾ ಮೇ 26 ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ಪ್ರೀಮಿಯರ್ ಶೋ ನಗರದ ಭಾರತ್ ಸಿನಿಮಾಸ್‍ನಲ್ಲಿ ನಡೆಯಿತು.
ಸತೀಶ್ ಪೆರ್ನೆ ಹಾಗೂ ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಈ ಸಿನಿಮಾ ಹಾಸ್ಯಭರಿತ ಕೌಟುಂಬಿಕ ಕತೆಯ ಎಳೆಯನ್ನು ಹೊಂದಿದೆ. ಊರಿನ ಜನರಿಂದ ಪಿರ್ಕಿಲು ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರ ಸೃಷ್ಟಿಸುತ್ತಾರೆ ಎಂಬುದನ್ನು ಹಾಸ್ಯಭರಿತವಾಗಿ ಕಟ್ಟಿಕೊಟ್ಟಿದ್ದಾರೆ. ಇದೀಗ ಪಿರ್ಕಿಲು ಸಿನಿಮಾದ ಪ್ರೀಮಿಯರ್ ಶೋ ಯಶಸ್ವಿಯಾಗಿ ನಡೆಯಿತು. ಸಿನಿ ಪ್ರೇಕ್ಷಕರು ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ನಾಳೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಚಿತ್ರಮಂದಿರದಲ್ಲಿ ಪಿರ್ಕಿಲು ಸಿನಿಮಾ ಬಿಡುಗಡೆಗೊಳ್ಳಲಿದೆ. ಈ ಸಿನಿಮಾಕ್ಕೆ ಸುಳ್ಯ, ಪುತ್ತೂರು, ಮಂಗಳೂರು, ಕುರಿಯ, ಉಪ್ಪಿನಂಗಡಿಯಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ. ನಾಯಕರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿಸೋಜ, ಲತಾ ಅಭಿನಯಿಸಿದ್ದಾರೆ. ತಾರಾ ಬಳಗದಲ್ಲಿ ಅರವಿಂದ ಬೋಳಾರ್, ಬೋಜರಾಜ ವಾಮಂಜೂರು, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಸುಮಿತ್ರ ರೈ, ಅಮಿತಾ, ನವೀನ್ ಬೋಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೊಹನ್, ಸೋನಿ ಅಭಿನಯಿಸಿದ್ದಾರೆ.
ನಿರ್ದೇಶಕ ಎಚ್.ಡಿ. ಆರ್ಯ ಅವರೇ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಬಿತ ತುಳು ಸಂಭಾಷಣೆಯನ್ನು ತರ್ಜುಮೆಯನ್ನು ಮಾಡಿದ್ದಾರೆ. ಎ.ಆರ್ ಕೃಷ್ಣ ಮತ್ತು ಅಭಿಷೇಕ್ ರಾವ್ ಅವರು ಸಂಕಲನ, ವಿ ಮನೋಹರ ಅವರು ಸಂಗೀತ, ವಿ.ಮನೋಹರ್ ಮತ್ತು ಶ್ರೀಧರ್ ಕರ್ಕೇರ ಅವರು ಸಾಹಿತ್ಯ, ಎ. ಆರ್ ಕೃಷ್ಣ ಛಾಯಾಗ್ರಹಣದಲ್ಲಿ ಸಹಕರಿಸಿದ್ದಾರೆ. ಒಟ್ಟಿನಲ್ಲಿ ಪಿರ್ಕಿಲು ಸಿನಿಮಾ ಹಾಸ್ಯದೊಂದಿಗೆ ಉತ್ತಮ ಕಥಾ ಹಂದರವನ್ನು ಹೊಂದಿದ್ದು, ಕರಾವಳಿಯಾದ್ಯಂತ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಮೇ 26ರಂದು ಬೆಳಿಗ್ಗೆ 10.30ಕ್ಕೆ ನಗರದ ಭಾರತ್ ಸಿನಿಮಾಸ್‍ನಲ್ಲಿ ಸಿನಿಮಾದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.