ಪಿಲಿಕುಳ ನಿಸರ್ಗಧಾಮ : ಹಾವಿನ ಕೋಣೆಯೊಂದರಲ್ಲಿ ಕಚ್ಚುವ ಇರುವೆ ಪ್ರತ್ಯಕ್ಷ

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಹಾವೊಂದರ ಕೋಣೆ ತುಂಬಾ ಕಚ್ಚುವ ಇರುವೆಗಳು ಸೃಷ್ಠಿಯಾಗಿದ್ದು ಇದರಿಂದ ಹಾವು ನರಕ ಅನುಭವಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಿಲಿಕುಳ ನಿಸರ್ಗಧಾಮದಲ್ಲಿರುವ ಹಾವೊಂದು ಇರುವೆಗಳು ಕಚ್ಚಿ ನೋವನ್ನು ಅನುಭವಿಸುತ್ತಿರುವ ದೃಶ್ಯವನ್ನು ಪಿಲಿಕುಳಕ್ಕೆ ಭೇಟಿ ಕೊಟ್ಟ ಪ್ರವಾಸಿಗರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ. ಪಿಲಿಕುಳದಲ್ಲಿ ಪ್ರವಾಸಿಗರ ವೀಕ್ಷಣೆಗೆ ಇರಿಸಲಾಗಿರುವ ಹಾವು ಸಂರಕ್ಷಣೆಯ ಪೆಟ್ಟಿಗೆಯೊಳಗೆ ಪೂರ್ತಿ ತುಂಬಿರುವ ಇರುವೆಗಳಿಂದ ಕಚ್ಚಿ ಹಾವೊಂದು ನೋವು ಅನುಭವಿಸುತ್ತಿದ್ದು, ನೀರಿನಲ್ಲಿ ಹಾಗೂ ಹೊರಗಡೆ ಹೊರಳಾಡುವ ದೃಶ್ಯ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.

ಪ್ರದರ್ಶನಕ್ಕೆ ಇಟ್ಟಿರುವ ಹಾವುಗಳಲ್ಲಿ ಒಂದಾದ ಸಾಧು ಸಂತತಿಯ ಹಾವು ಇರುವ ಕೋಣೆಯಲ್ಲಿ ಇದ್ದಕಿದ್ದಂತೆ ಇರುವೆಗಳು ಮುತ್ತಿಕ್ಕಿಕೊಂಡಿತ್ತು.ಕೋಣೆಯ ಸುತ್ತಲೂ ಆವರಿಸಿಕೊಂಡಿರುವುದರಿಂದ ಹಾವು ನೋವು ಅನುಭವಿಸುತ್ತ ಅದೇ ಕೋಣೆಯಲ್ಲಿ ಪರದಾಡುವಂತಾಗಿತ್ತು.
