ಸಮುದಾಯ ಸ್ಥಳಗಳ ಪರಿಣಾಮಕಾರಿ ನಿರ್ವಹಣೆ ಕುರಿತು ತಜ್ಞರ ಸಭೆ : ಪ್ಲೇಸ್ ಮೇಕಿಂಗ್ ಇಂಡಿಯಾ ತಂಡದಿಂದ ಮಂಗಳೂರಿನಲ್ಲಿ ಸ್ಥಳ ಭೇಟಿ

ಮಂಗಳೂರು :- ನಗರ ವಾಸ್ತುಶಿಲ್ಪಿಗಳು, ನಗರ ಯೋಜಕರು, ತಜ್ಞರು, ವಿನ್ಯಾಸಕರು, ಮಾನವ ಭೂಗೋಳ ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು, ಸ್ಥಳೀಯರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ಪ್ಲೇಸ್ ಮೇಕಿಂಗ್ ಇಂಡಿಯಾ ತಂಡದಿಂದ ಮಂಗಳೂರು ನಗರದಲ್ಲಿ ಸಮುದಾಯ ಸ್ಥಳಗಳ ಪರಿಣಾಮಕಾರಿ ನಿರ್ವಹಣೆ ಕುರಿತಂತೆ ಸುರತ್ಕಲ್ ನಲ್ಲಿರುವ ನಿರ್ಮಿತಿ ಕೇಂದ್ರದ ಆವರಣದಲ್ಲಿ ಸಭೆ ಹಾಗೂ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. ದೇಶದ 65ಕ್ಕೂ ಹೆಚ್ಚು ಪ್ಲೇಸ್ ಮೇಕರ್ಸ್ ಗಳು ಹಾಗೂ ಆರು ದೇಶಗಳ ಪರಿಣತರು ತಂಡದಲ್ಲಿದ್ದು, ಅವರು ಸಮುದಾಯ ಸ್ಥಳಗಳ ಪರಿಣಾಮ ಕಾರ್ಯ ನಿರ್ವಹಣೆ ಕುರಿತಂತೆ ಸಭೆ ಹಾಗೂ ಸಂವಾದ ಕಾರ್ಯಕ್ರಮವನ್ನು ನಡೆಸಿದರು.

ಅಮೆರಿಕದ ತಜ್ಞ ರಿಯಾನ್ಸ್ ಮೋಲಾರ್ ಮಾತನಾಡಿ ಭವಿಷ್ಯ ಹಾಗೂ ದೂರದೃಷ್ಟಿಯನ್ನಿಟ್ಟುಕೊಂಡು ನಗರದ ಅಭಿವೃದ್ಧಿ ಚಟುವಟಿಕೆಗಳನ್ನು ರೂಪಿಸುವುದು ಉತ್ತಮ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡು ದೇಶ ಹಾಗೂ ಸುಂದರ ಸಮಾಜವನ್ನು ಕಟ್ಟುವ ಬಗ್ಗೆ ತಿಳಿಸಿದರು.

ಮುಂಬೈನ ವಾಸ್ತುಶಿಲ್ಪಿ ಪಿ.ಕೆ. ದಾಸ್ ಅವರು ಮಾತನಾಡಿ, ಸರ್ಕಾರದಿಂದ ಯಾವುದೇ ಒಂದು ಯೋಜನೆಯನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಅಗತ್ಯ ಅನುದಾನವೂ ಬಿಡುಗಡೆಯಾಗುತ್ತದೆ, ಈ ಸಂದರ್ಭದಲ್ಲಿ ಒಂದೇ ಲೈನ್ ನಲ್ಲಿ ಕಾಮಗಾರಿ ಆರಂಭಗೊಳ್ಳಬೇಕು, ಈಗಾಗಲೇ ಜಗತ್ತಿನಲ್ಲಿರುವ ಯಾವುದೇ ದೊಡ್ಡ ನಗರವನ್ನು ಒಂದು ಮಾದರಿಯನ್ನಾಗಿಟ್ಟುಕೊಳ್ಳುವ ಬದಲಿಗೆ ಸ್ಥಳೀಯ ಪ್ರಾದೇಶಿಕ ಸೊಗಡು, ಪ್ರಾದೇಶಿಕ ಅವಶ್ಯಕತೆಗಳನ್ನು ಬಳಸಿ ಸ್ಥಳೀಯರಿಗೆ ಅನುಕೂಲ ಕಲ್ಪಿಸುವಂತಹ ಕೆಲಸ ಮಾಡಿಕೊಡಬೇಕು ಎಂದರು.

ಕೇರಳದ ಜಾರ್ಜ್ ಎಸಫ್ ಅವರು ಮಾತನಾಡಿ, ಸಮುದ್ರ ಕಿನಾರಿಗಳಲ್ಲಿ ವಿಕಲಚೇತನರಿಗೂ ವಿಹಾರ ಹಾಗೂ ಅದರೂ ಕೂಡ ಸಮುದ್ರ ತೀರವನ್ನು ಆಸ್ವಾದಿಸುವಂತೆ ಮಾಡಬಹುದಾದ ಚಟುವಟಿಕೆಗಳ ಬಗ್ಗೆ ತಿಳಿಸಿದರು.ನಂತರ ಈ ತಂಡವು ಬೋಳಾರ ದಿಂದ ಬೆಂಗ್ರೆ ವರೆಗೆ ನದಿ ತೀರದ ಪ್ರದೇಶಗಳು, ಹಳೆ ಬಂದರು ಪ್ರದೇಶಗಳು ಹಾಗೂ ಹಂಪನ ಕಟ್ಟೆಯ ಮಾರುಕಟ್ಟೆ ಪ್ರದೇಶಗಳಲ್ಲಿ ತೆರಳಿ ಸ್ಥಳ ಪರಿಶೀಲನೆ ನಡೆಸಿತು.

ದೆಹಲಿಯ ನಗರ ಯೋಜನಾ ತಜ್ಞರಾದ ಅಂಬಿಕಾ ಮಲ್ಹೋತ್ರಾ, ಅಮೇರಿಕಾದ ಇಥನ್ ಕೆಂತ್, ವಿನಿತಾ ಶೆಟ್ಟಿ ಹಾಗೂ ಇತರರಿದ್ದರು. ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು

Related Posts

Leave a Reply

Your email address will not be published.