ಕೊಲೆಯತ್ನ ಪ್ರಕರಣದ ಆರೋಪಿ ತಲ್ಹತ್ ಬಂಧನ
ವಿಚಾರಕ್ಕೆ ಸಂಬಂಧಿಸಿ ನಾಲ್ಕು ತಿಂಗಳ ಹಿಂದೆ ಉಚ್ಚಿಲ ಸಮೀಪ ನಡೆದಿದ್ದ ಯುವಕನ ಕೊಲೆಯತ್ನ ಪ್ರಕರಣದ ಆರೋಪಿ ತಲ್ಹತ್ ಎಂಬಾನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಕಮೀಷನರ್ ಎನ್.ಶಶಿಕುಮಾರ್ ಹೇಳಿದರು. ಈ ಕುರಿತು ಮಂಗಳೂರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈತನ ಮೇಲೆ ಮಂಗಳೂರು ಸೇರಿದಂತೆ ಹೊರರಾಜ್ಯದಲ್ಲೂ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರಿಸಿಕೊಂಡಿದ್ದ, ಈತನ ಸಹಚರ ಮೇಲೂ ಹಲವು ಪ್ರಕರಣ ದಾಖಲಾಗಿದೆ. ಉಚ್ಚಿಲ ಸಮೀಪ ನಡೆದಿದ್ದ ಯುವಕನ ಕೊಲೆಯತ್ನ ಪ್ರಕರಣದಲ್ಲಿ 8 ಮಂದಿಯನ್ನ ಬಂಧಿಸಲಾಗಿದೆ. ರೌಡಿ ತಲ್ಹತ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸಹಿತ ಹಲವು ಪ್ರಕರಣಗಳಿವೆ ಎಂದು ಪೊಲೀಸ್ ಕಮೀಷನರ್ ಹೇಳಿದರು.