ಮ್ಯೂನಿಕ್‍ನಿಂದ ವಾಪಾಸು ಬಂದ ಸಂಸದ ಪ್ರಜ್ವಲ್ : ಕೋರ್ಟಿಗೆ ಹಾಜರುಪಡಿಸಿ ವಶಕ್ಕೆ ಪಡೆಯುವ ಪ್ರಕ್ರಿಯೆ
ಜರ್ಮನಿಯ ಮ್ಯೂನಿಕ್‍ನಿಂದ ಹಿಂತಿರುಗಿದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಶುಕ್ರವಾರ ಆರಂಭವಾದ ಗಂಟೆ 12.50 ನಿಮಿಷಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು.
ಸಿಐಎಸ್‍ಎಫ್- ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಮತ್ತು ವಲಸೆ ಅಧಿಕಾರಿಗಳ ನೆರವಿನಿಂದ ವಿಮಾನದಿಂದ ಇಳಿದು ಬರುವಾಗಲೆ ಎಸ್‍ಐಟಿ- ವಿಶೇಷ ತನಿಖಾ ದಳದವರು ಪ್ರಜ್ವಲ್‍ರನ್ನು ಬಂಧಿಸಿದರು. ಪಕ್ಕದ ಭದ್ರತಾ ಕೊಠಡಿಗೆ ಕರೆದೊಯ್ದು ಹೆಬ್ಬೆರಳು ಅಚ್ಚು ಪಡೆದರು ಹಾಗೂ ಫೋಟೋ ಹಿಡಿದರು. ಒಂದೂವರೆ ಗಂಟೆಯ ಹೊತ್ತಿಗೆ ಹತ್ತಿರದ ಕಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದರು.
ಅನಂತರ ಅರಮನೆ ರಸ್ತೆಯಲ್ಲಿನ ಸಿಐಡಿ ಕಚೇರಿಯಲ್ಲಿನ ಎಸ್‍ಐಟಿ ವಿಭಾಗಕ್ಕೆ ಅವರನ್ನು ಕರೆತರಲಾಯಿತು. ಅಲ್ಲಿ ಅವರ ವಿಚಾರಣೆ ನಡೆಯಿತು. ಶುಕ್ರವಾರ ಕೋರ್ಟಿಗೆ ಹಾಜರುಪಡಿಸಿದರು. ಕಸ್ಟಡಿ ಕೇಳುವ ಪ್ರಕ್ರಿಯೆ ಇದೆ.