ಪ್ರತಿಭಾ ಕುಳಾಯಿಯವರ ಮಾನಹಾನಿ ಪ್ರಕರಣ-ಆರೋಪಿಗಳನ್ನು ಬಂಧಿಸುವoತೆ ಬಿಲ್ಲವ ಸಂಘಟನೆಗಳ ಪ್ರಮುಖರಿಂದ ಮನವಿ

ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿಯವರ ಮಾನಹಾನಿ ಪ್ರಕರಣದ ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಮಂಗಳೂರು ಪೊಲೀಸ್ ಕಮೀಷನರ್ ಎನ್ .ಶಶಿಕುಮಾರ್ ಅವರಿಗೆ ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯ್ತು. ನಗರದ ಕಮೀಷನರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ, ಬಿಲ್ಲವ ಸಂಘಟನೆಗಳ ಮುಖಂಡರು, ಒoದು ವಾರ ಕಳೆದರೂ, ಆರೋಪಿಯನ್ನು ಇಲ್ಲಿ ತನಕ ಬಂಧಿಸಿಲ್ಲ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಾಜದ ಸ್ವಾಸ್ಥ ಕೆಡಿಸುವ ಆರೋಪಿಯನ್ನು ಬಂಧಿಸಬೇಕೆoದು ಇದೇ ವೇಳೆ ಮುಖಂಡರು ಒತ್ತಾಯಿಸಿದರು.

manavi

ಈ ವೇಳೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಗೆಜ್ಜೆಗಿರಿ ಉಪಾಧ್ಯಕ್ಷ ರವಿ ಪೂಜಾರಿ, ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಸೇವಾ ಸಂಘದ ಸಲಹೆಗಾರ ಅನಂದ್ ಅಮೀನ್, ಕುಳಾಯಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ ಬಂಗೇರ, ಸಂಘಟನಾ ಕಾರ್ಯದರ್ಶಿ ರಾಜೇಶ್ ಕುಳಾಯಿ, ರಾಜೇಂದ್ರ ಚಿಲಿಂಬಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

¸

Related Posts

Leave a Reply

Your email address will not be published.