ಪ್ರವೀಣ್ ನೆಟ್ಟಾರು ಅವರ ಹತ್ಯೆ : ಉದ್ವಗ್ನಿ ಸ್ಥಿತಿಯತ್ತ ತಿರುಗಿದ್ದ ಬೆಳ್ಳಾರೆ ಪೇಟೆ ಇಂದು ಸಹಜ ಸ್ಥಿತಿಯತ್ತ

ಸುಳ್ಯ:ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬಳಿಕ ನಿನ್ನೆ ಬಂದ್, ಪ್ರತಿಭಟನೆ, ಲಾಠಿ ಚಾರ್ಜ್ ನಡೆದು ಉದ್ವಗ್ನಿ ಸ್ಥಿತಿಯತ್ತ ತಿರುಗಿದ್ದ ಬೆಳ್ಳಾರೆ ಪೇಟೆ ಇಂದು ಸಹಜ ಸ್ಥಿತಿಯತ್ತ ಮರಳಿದೆ. ಇಂದು ಬೆಳಿಗ್ಗಿನಿಂದ ಪೇಟೆಯು ಸಹಜ ಸ್ಥಿತಿಗೆ ಮರಳಿದ್ದು ಅಂಗಡಿ ಮುಂಗಡಿಗಳು ತೆರೆದು ಕೊಂಡಿದೆ, ವಾಹನ ಸಂಚಾರ, ಜನ ಸಂದಣಿ

ಮಾಮೂಲಿಯಂತೆ ಇದೆ. ಶಾಲಾ ಕಾಲೇಜುಗಳು ತೆರೆದು ಕೊಂಡಿದೆ. ಬೆಳ್ಳಾರೆ ಪೇಟೆ ಮತ್ತು ಪರಿಸರದಲ್ಲಿ ಬಿಗು ಪೆÇಲೀಸ್ ಬಂದೋಬಸ್ತ್ ಮುಂದುವರಿದಿದೆ. ಭದ್ರತೆಗಾಗಿ ಹೆಚ್ಚುವರಿ ಪೆÇಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಿನ್ನೆ ಸಂಪೂರ್ಣ ಬಂದ್ ಆಗಿದ್ದು ಪ್ರವೀಣ್ ನೆಟ್ಟಾರು ಮೃತದೇಹದ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಸೇರಿದ್ದರು. ಅಂತಿಮ ದರ್ಶನದ ಸ್ಥಳಕ್ಕೆ ಬಂದ ಬಿಜೆಪಿ ಮುಖಂಡರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೆÇಲೀಸರು ಪರಿಸ್ಥಿತಿ ನಿಭಾಯಿಸಿ ಪರಿಸ್ಥಿಯನ್ನು ಹತೋಟಿಗೆ ತಂದಿದ್ದರು.

Related Posts

Leave a Reply

Your email address will not be published.