ಪ್ರವೀಣ್ ನೆಟ್ಟಾರು ಹತ್ಯೆ ಮೂವರು ಆರೋಪಿಗಳ ಬಂಧನ

ಕೇರಳ ಗಡಿಭಾಗ ತಲಪಾಡಿಯ ಚೆಕ್‍ಪೋಸ್ಟ್ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಲಾಯಿತು ಎಂದು ಎಡಿಜಿಪಿ ಅಲೋಕ್ ಕುಮಾರ್ ವಿವರ ನೀಡಿದರು. ಬಂಧಿತರನ್ನು ಸುಳ್ಯದ ಶಿಹಾಬುದ್ದೀನ್ (33), ರಿಯಾಜ್ ಅಂಕತ್ತಡ್ಕ (27), ಬಶೀರ್ ಎಲಿಮಲೆ (28) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಶಿಹಾಬ್ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಪೂರೈಕೆ ಮಾಡುವ ವೃತ್ತಿಯಲ್ಲಿದ್ದ. ರಿಯಾಜ್ ಎಂಬಾತ ಬೆಳ್ಳಾರೆ ಮತ್ತು ಸುಳ್ಯದಲ್ಲಿ ಚಿಕನ್ ಸಪ್ಲೈ ಕೆಲಸ ಮಾಡುತ್ತಿದ್ದ, ಇನ್ನೋರ್ವ ಬಂಧಿತ ಬಶೀರ್ ಹೊಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದರು. ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಸಿಐಡಿ ಎಸ್ಪಿ ಅನುಚೇತ್, ಹಾಸನ ಪೊಲೀಸ್ ಅಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಚಿಕ್ಕಮಗಳೂರು, ಮಂಡ್ಯ, ಉಡುಪಿ ಪೊಲೀಸರು ಸಹಕಾರ ನೀಡಿದ್ದಾರೆ. ಸುಳ್ಯ ಇನ್ಸ್‍ಪೆಕ್ಟರ್ ನವೀನಚಂದ್ರ ಜೋಗಿ ಅವರ ತಂಡವು ಆರೋಪಿಗಳ ಮೇಲೆ ನಿಗಾ ಇರಿಸಿ ಈ ಬಂಧನ ಕಾರ್ಯಾಚರಣೆ ನಡೆಸಿದೆ. ಮೊದಲು ಕಾಸರಗೋಡಿನ ಮಾಲಿಕುದ್ದೀನಾರ್ ಮಸೀದಿ ಬಳಿಗೆ ಹೋಗಿದ್ರು. ಬೇರೆ ಯಾರು ಸಹಾಯ ಮಾಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ತೇವೆ. ಪ್ರವೀಣ್ ಯಾಕೆ ಟಾರ್ಗೆಟ್ ಆಗಿದ್ದ ಅನ್ನೋದು ತನಿಖೆಯ ಬಳಿಕ ತಿಳಿಯಬೇಕು. ಸ್ಪ್ಲೆಂಡರ್ ವೆಹಿಕಲ್ ಬಳಕೆಯಾಗಿದೆ, ಐದಾರು ವಾಹನ ಬಳಕೆ ಮಾಡಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಕೃತ್ಯ ಎಸಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ತಲಪಾಡಿ ಚೆಕ್‍ಪೆÇೀಸ್ಟ್ ಬಳಿ ಪೆÇಲೀಸರು ಬಂಧಿಸಿದ್ದಾರೆ ಸುಳ್ಯದ ಶಿಹಾಬುದ್ದೀನ್ (33), ರಿಯಾಜ್ ಅಂಕತ್ತಡ್ಕ (27), ಬಶೀರ್ ಎಲಿಮಲೆ (28) ಬಂಧಿತರು ಶಿಹಾಬ್ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಪೂರೈಕೆ ಮಾಡುತ್ತಿದ್ದ ರಿಯಾಜ್, ಬೆಳ್ಳಾರೆ, ಸುಳ್ಯದಲ್ಲಿ ಚಿಕನ್ ಸಪ್ಲೈ ಮಾಡುತ್ತಿದ್ದ ಬಶೀರ್ ಹೊಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದ ಅನುಚೇತ್ ಎಸ್ಪಿ ಸಿಐಡಿ, ಹರಿರಾಮ್ ಶಂಕರ್ ಸೇರಿ ಚಿಕ್ಕಮಗಳೂರು, ಮಂಡ್ಯ, ಉಡುಪಿ ಪೆÇಲೀಸರು ಸಹಕಾರ ನೀಡಿದ್ದಾರೆ .ಸುಳ್ಯ ಇನ್ಸ್‍ಪೆಕ್ಟರ್ ನವೀನಚಂದ್ರ ಜೋಗಿ ತಂಡ ನಿಗಾ ಇಟ್ಟು ಬಂಧಿಸಿದ್ದಾರೆ ಮೊದಲು ಕಾಸರಗೋಡಿನ ಮಾಲಿಕುದ್ದೀನಾರ್ ಮಸೀದಿ ಬಳಿಗೆ ಹೋಗಿದ್ರು ಯಾರು ಸಹಾಯ ಮಾಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ತೇವೆ ಪ್ರವೀಣ್ ಯಾಕೆ ಟಾರ್ಗೆಟ್ ಆಗಿದ್ದ ಅನ್ನೋದು ತನಿಖೆಯ ಬಳಿಕ ತಿಳಿಯಬೇಕು ಸ್ಪ್ಲೆಂಡರ್ ವೆಹಿಕಲ್ ಬಳಕೆಯಾಗಿದೆ, ಐದಾರು ವಾಹನ ಬಳಕೆ ಮಾಡಿದ್ದಾರೆ ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ

Related Posts

Leave a Reply

Your email address will not be published.